ನೆರಿಯ ಶಾಂತಮ್ಮ ನಿಧನ

ನೆರಿಯ ಗ್ರಾಮದ, ನೆರಿಯ ಮಿಲ್ಕ್ ಸೊಸೈಟಿ ಅಧ್ಯಕ್ಷ ಹಾಗೂ ಜನತಾದಳ ಸಕ್ರಿಯ ಕಾರ್ಯಕರ್ತ ಕುಳೆನಾಡಿ ಕೆ ರಾಮಕೃಷ್ಣ ಗೌಡರ ಧರ್ಮಪತ್ನಿ ಶ್ರೀಮತಿ ಶಾಂತಮ್ಮ (53) ಅಲ್ಪಕಾಲದ ಅಸೌಖ್ಯದಿಂದ ಜು.15 ರಂದು ನಿಧನರಾದರು.

ಇವರು ಪ್ರಖ್ಯಾತ ಪ್ರಸೂತಿ ತಜ್ಞೆಯಾಗಿದ್ದರು. ಸುತ್ತಮುತ್ತಲ ಗ್ರಾಮಗಳಿಂದ ಪ್ರಸೂತಿಗಾಗಿ ಇವರಲ್ಲಿಗೆ ಹಾಗೂ ಇವರನ್ನು ಕರಕೊಂಡು ಹೋಗುತ್ತಿದ್ದರು. ಅಲ್ಲದೆ ಆಯುರ್ವೇದಿಕ್ ಔಷಧಿಗಳನ್ನು ಕೂಡಾ ಕೊಡುತ್ತಿದ್ದರು ಊರಲ್ಲಿ ಎಲ್ಲರಿಗೂ ಶಾಂತಕ್ಕರಂದೇ ಪ್ರಸಿದ್ಧಿಯಾಗಿದ್ದರು
ಮೃತರು ಪತಿ ಕೆ. ರಾಮಕೃಷ್ಣಗೌಡ, ಪುತ್ರ ಸಜ್ಜನ್ ಕೆ. ಆರ್., ಪುತ್ರಿ ಬೆಂಗಳೂರು ಸೆಂಟ್‌ಜಾನ್ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಸೌಮ್ಯ ಕೆ.ಆರ್, ಅಲ್ಲದೆ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.