ಕೊರೊನಾ ವೈರಸ್ ಮುಕ್ತಿ ಪಡೆಯಲು ಬೆಳ್ತಂಗಡಿ ಧರ್ಮಪ್ರಾಂತ್ಯ ದಿಂದ ವಿಶೇಷ ಪ್ರಾರ್ಥನೆಗೆ ಆಹ್ವಾನ

Advt_NewsUnder_1
Advt_NewsUnder_1
Advt_NewsUnder_1

ಕೊರೋನಾ ವೈರಸ್: ಕೋವಿಡ್ 19ರಿಂದ ಮುಕ್ತಿ ಪಡೆಯಲು ಬೆಳ್ತಂಗಡಿ ಧರ್ಮಪ್ರಾಂತ್ಯದ ಭಕ್ತಭಿಮಾನಿಗಳೆಲ್ಲರೂ ವೃತತೊಟ್ಟು ನವದಿನಗಳ (ಜು.19-28) ವಿಶೇಷ ಪ್ರಾರ್ಥನೆ ವರ್ಷಂಪ್ರತಿ ಜುಲೈ ತಿಂಗಳಲ್ಲಿ ನಾವು ಸಂತ ಅಲ್ಫೋನ್ಸರವರ ಹಬ್ಬವನ್ನಾಗಿ ಆಚರಿಸುವುದು ವಾಡಿಕೆಯಾಗಿದೆ. ಕೋವಿಡ್ 19ರ ಆಕ್ರಮಣವು ತೀವ್ರಗೊಳ್ಳುವ ಹಿನ್ನಲೆಯಲ್ಲಿ ಕೊರೋನಾ ಮಹಾಮಾರಿಯನ್ನು ನಮ್ಮೂರಿನಿಂದಲೂ ಮಾನವ ಸಮೂಹದಿಂದಲೂ ನಿರ್ಮೂಲನೆಗೊಳಿಸಲು ಈ ಮೇಲೆ ತಿಳಿಸಿದ ನವದಿನಗಳಲ್ಲಿ ಧರ್ಮಪ್ರಾಂತ್ಯದ ಧಾರ್ಮಿಕ ಕೇಂದ್ರಗಳಲ್ಲಿ ಪ್ರತಿನಿತ್ಯದ ದಿವ್ಯಬಲಿಪೂಜೆ, ಪರಮಪ್ರಸಾದದ ಆರಾಧನೆ ಹಾಗೂ ಪ್ರತ್ಯೇಕ ಪ್ರಾರ್ಥನೆಗಳನ್ನು ಧರ್ಮಗುರುಗಳು ಕೋವಿಡ್-19ರ ನೀತಿನಿಯಮ, ಇತಿಮಿತಿಗಳಿಗೆ ಒಳಪಟ್ಟು ನಡೆಸಲಿರುವರು. ನಮ್ಮೀ ವಿಶೇಷ ಪ್ರಾರ್ಥನೆಯ ಧೇಯವು ಕೊರೋನಾ ಮಹಾಮಾರಿಯ ನಿರ್ಮೂಲನೆ, ಔಷಧಿ ಲಭ್ಯತೆ ಮತ್ತು ಉದ್ಭವಿಸಿರುವ ಈ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸುವುದಾಗಿರುತ್ತದೆ. ಭಕ್ತರೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿದ್ದು ಈ ನವದಿನಗಳಲ್ಲಿ ವೃತತೊಟ್ಟು, ವೈಯಕ್ತಿಕ ಪ್ರಾರ್ಥನೆಗಳ ಮೂಲಕ ದೇವರಯಲ್ಲಿ ಮೊರೆಯಿಟ್ಟು ಅತ್ಯಂತ ಭಕ್ತಿಪೂರ್ವಕವಾಗಿ ಯಾಚಿಸುವಂತೆ ಧರ್ಮಾಧ್ಯಕ್ಷರು ಮನವಿ ಮಾಡಿರುತ್ತಾರೆ.

ಈ ಪ್ರಯುಕ್ತ ಜು.28ನೇ ದಿನವನ್ನು ಈ ನವದಿನಗಳ ಸಮಾರೋಪ ಆಶೀರ್ವಾದದ ದಿನವನ್ನಾಗಿ ಆಚರಿಸಲಿದ್ದೇವೆ. ಈ ಪುಣ್ಯದಿನದಂದು ಬೆಳಿಗ್ಗೆ ಗಂಟೆ 7.೦೦ಕ್ಕೆ ಧರ್ಮಪ್ರಾಂತ್ಯದ ಕೆಥೆಡ್ರಲ್ ದೇವಾಲಯದಲ್ಲಿ ಪರಮ ಪೂಜ್ಯ ಬಿಷಪ್ ಲಾರೆನ್ಸ್ ಮುಕ್ಕುಯಿಯವರು ದಿವ್ಯಬಲಿಪೂಜೆಯನ್ನು ಅರ್ಪಿಸಲಿರುವರು, ಸಂಜೆ ಗಂಟೆ 7.30ಕ್ಕೆ ವಿಶೇಷ ಪ್ರಾರ್ಥನೆ ನಡೆಯಲಿದ್ದು ಗಂಟೆ 8.೦೦ಕ್ಕೆ ಸರಿಯಾಗಿ ಪರಮ ಪೂಜ್ಯರು ಪರಮಪ್ರಸಾದದ ಆರಾಧನೆಯೊಂದಿಗೆ ಸರ್ವರನ್ನೂ ಹರಸಲಿದ್ದಾರೆ. ಆದ್ದರಿಂದ ಈ ಸಮಯದಲ್ಲಿ ಭಕ್ತಜನರೆಲ್ಲರೂ ತಾವಿರುವಲ್ಲಿಯೇ ಮೊಣಕ್ಕಾಲೂರಿ ಕೈಜೋಡಿಸಿ ಶಿರಭಾಗಿಸಿ ಪರಮಪ್ರಸಾದದ ಆಶೀರ್ವಾದವನ್ನು ಪಡೆಯಬೇಕ್ಕಾಗಿ ಕೋರುತ್ತೇವೆ. ಜು.28 ಸಂಜೆ ನಡೆಯಲಿರುವ ಈ ಪವಿತ್ರ ಕಾರ್ಯಕ್ರಮದ ನೇರಪ್ರಸಾರವು ಯೂಟ್ಯೂಬ್ ಚಾನೆಲ್‌ನಲ್ಲಿ ಯಥಾಸಮಯದಲ್ಲಿ ವೀಕ್ಷಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದೂ, ಭಕ್ತಾಭಿಮಾನಿಗಳೆಲ್ಲರೂ ಇದರ ಸದುಪಯೋಗವನ್ನು ಪಡೆಯುವಂತೆಯೂ ಧರ್ಮಪ್ರಾಂತ್ಯದ ಪಿ.ಆರ್.ಒ ರವರು ವಿನಂತಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.