ಬಳಂಜ: ಮರಗಳು ರಸ್ತೆಗೆ ಉರುಳಿ ವಿದ್ಯುತ್ ಕಂಬ ತುಂಡಾಗಿ ಹಲವೆಡೆ ಹಾನಿ

ಬಳಂಜ: ಬಳಂಜ ಗ್ರಾಮ ಪಂಚಾಯತ್‌ಗೊಳಪಟ್ಟ ಬಳಂಜ ಮತ್ತು ನಾಲ್ಕೂರು ಗ್ರಾಮದ ಹಲವಡೆ ಜೋರಾದ ಗಾಳಿ ಮಳೆಗೆ ಬೃಹತಾಕಾರದ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಹಾನಿಯಾಗಿದೆ.

ಬಳಂಜ ಹಾಲು ಸೊಸೈಟಿ ಪರಾರಿ ಬಳಿ ಹಾಗೂ ನಾಲ್ಕೂರು ಗ್ರಾಮದ ಬೊಳ್ಳಾಜೆ ಬಗ್ಯೋಟ್ಟು ತಿರುವಿನಲ್ಲಿ ಮತ್ತು ನಾಲ್ಕೂರು ಖಂಡಿಗ ಎಂಬಲ್ಲಿ ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿ ಬಿದ್ದು ಕಂಬಗಳು ತುಂಡಾಗಿದೆ. ಅಟ್ಲಾಜೆಯಲ್ಲಿ ಮಾವಿನ ಮರ ಬಿದ್ದು ಅಡಿಕೆ, ಬಾಳೆ ಕೃಷಿಗೆ ಹಾನಿಯಾಗಿದೆ. ವಿದ್ಯುತ್ ತಂತಿ ಮೇಲೆ ಮರ ಬಿದ್ದ ಕಾರಣ ರಾತ್ರಿಯಿಡಿ ವಿದ್ಯುತ್ ವ್ಯತ್ಯಯವಾಯಿತು. ಮೆಸ್ಕಾಂ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮರಗಳನ್ನು ತೆರವುಗೊಳಿಸುವ ಕೆಲಸ ಮಾಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.