ಲಾಕ್‍ಡೌನ್ ಗೆ ಬೆಳ್ತಂಗಡಿ ತಾಲೂಕಿನಾದ್ಯಂತ ಜನಜೀವನ ಸ್ತಬ್ದ; 11 ಗಂಟೆಯ ಬಳಿಕ ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಬಂದ್

 

ಬೆಳ್ತಂಗಡಿ ಪೇಟೆ

ಬೆಳ್ತಂಗಡಿ: ಹೆಚ್ಚುತ್ತಿರುವ ಕೊರೊನಾ ಹಿನ್ನಲೆಯಲ್ಲಿ ಜು.16ರಿಂದ ಜಿಲ್ಲಾಡಳಿತ ಘೋಷಿಸಿರುವ ಲಾಕ್‍ಡೌನ್ ಕರೆಗೆ ಬೆಳ್ತಂಗಡಿ ತಾಲೂಕಿನಾದ್ಯಂತ ಬೆಳಗ್ಗೆ 11 ಗಂಟೆಯ ನಂತರ ಸಂಪೂರ್ಣ ಬಂದ್ ಆಗಿದ್ದು, ಜನಜೀವನ ಸ್ತಬ್ದವಾಗಿದೆ.

ಉಜಿರೆ ಪೇಟೆ

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇದರ ನಿಯಂತ್ರಣ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜು.16ರಿಂದ ಜು.22ರವರೆಗೆ ಒಂದು ವಾರಗಳ ಕಾಲ ದ.ಕ ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಮಾಡಿ ಜಿಲ್ಲಾಡಳಿತ ಆದೇಶ ನೀಡಿತ್ತು.  ಇದರಿಂದಾಗಿ ಕಳೆದ ಎರಡು ದಿನಗಳಲ್ಲಿ ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ,  ಸೇರಿದಂತೆ ಪ್ರಮುಖ ಪೇಟೆಗಳಲ್ಲಿ ದಿನಬಳಕೆಯ ವಸ್ತುಗಳ ಖರೀದಿಗಾಗಿ ಗ್ರಾಮಾಂತರ ಪ್ರದೇಶಗಳಿಂದ ಬಹಳಷ್ಟು ಜನರು ಬಂದಿದ್ದು, ಪೇಟೆಯಲ್ಲಿ ಬ್ಲಾಕ್ ಆಗಿ ಸಮಸ್ಯೆ ಕಾಡಿತ್ತು. ಆದರೆ, ಜು.16ರಂದು ಬೆಳಗ್ಗೆ 11 ಗಂಟೆ ತನಕ ದಿನಸಿ, ತರಕಾರಿ ಮೀನು ಹಾಗೂ ಮಾಂಸದ ಅಂಗಡಿಗಳು ತೆರೆದುಕೊಂಡಿದ್ದರೂ ಖರೀದಿದಾರರ ಸಂಖ್ಯೆ ವಿರಳವಾಗಿತ್ತು. ಪತ್ರಿಕೆ, ಮೆಡಿಕಲ್, ಕ್ಲಿನಿಕ್‍ಗಳು ಎಂದಿನಂತೆ ತೆರೆದುಕೊಂಡಿದೆ.

ಖಾಸಗಿ ಮತ್ತು ಕೆಎಸ್ಸಾರ್ಟಿಸಿ ಬಸ್‍ಗಳು ರಸ್ತೆಗೆ ಇಳಿದಿಲ್ಲ, ಬೆಳಗ್ಗೆ ಆಟೋ ರಿಕ್ಷಾ ಮತ್ತು ಇತರ ವಾಹನಗಳ ಓಡಾಟ ಇದ್ದರೂ, ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಕೆಲವು ಹೋಟೆಲ್‍ಗಳು ಮಾತ್ರ ತೆರೆದುಕೊಂಡಿದ್ದು, ಹೆಚ್ಚಿನ ಹೋಟೆಲ್‍ಗಳು ಬೆಳಗ್ಗೆಯಿಂದಲೇ ಬಾಗಿಲು ತೆರಿದಿಲ್ಲ, 11 ಗಂಟೆ ಹೊತ್ತಿಗೆ ಪೇಟೆಗಳಲ್ಲಿ ಅಂಗಡಿ, ಹೋಟೆಲ್‍ಗಳು ಬಂದ್ ಆಯಿತು. ಆಟೋ ಹಾಗೂ ಇತರ ವಾಹನಗಳು ಸಂಚಾರವನ್ನು ಸ್ಥಗಿತಗೊಳಿಸಿದವು. ಪೊಲೀಸರು ಪೇಟೆಗಳಲ್ಲಿ ಸಂಚರಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು.

ಗುರುವಾಯನಕೆರೆ ಪೇಟೆ

ಪಟ್ರಮೆ ಪೇಟೆ

ಧರ್ಮಸ್ಥಳ

ಗೇರುಕಟ್ಟೆ ಪೇಟೆ

ಮಡಂತ್ಯಾರು ಪೇಟೆ

ಕೊಕ್ಕಡ ಜಂಕ್ಷನ್

ನಾಳ -ನ್ಯಾಯತರ್ಪು ಪೇಟೆ

ಅರಸಿನಮಕ್ಕಿ ಪೇಟೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.