ತೆಂಕಕಾರಂದೂರು: ಬೈಕ್- ಬುಲೆಟ್ ಮುಖಾಮುಖಿ ಡಿಕ್ಕಿ ಸವಾರರಿಗೆ ಗಂಭೀರ ಗಾಯ

ತೆಂಕಕಾರಂದೂರು: ಇಲ್ಲಿನ ಗುಂಡೇರಿ ತಿರುವಿನಲ್ಲಿ ರಾತ್ರಿ ಬೈಕ್ ಮತ್ತು ಬುಲೆಟ್ ಮುಖಾಮುಖಿ ಡಿಕ್ಕಿಯಾಗಿ ಸವಾರರಿಬ್ಬರು ಗಂಭೀರ ಗಾಯಗೊಂಡು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಳಂಜದ ಗುರುಪ್ರಸಾದ್‌ರವರು ಸುಳ್ಯದಲ್ಲಿ ಉದ್ಯೋಗದಲ್ಲಿದ್ದು ತನ್ನ ಬುಲೆಟಿನಲ್ಲಿ ಮನೆಗೆ ವಾಪಾಸಾಗುತ್ತಿದ್ದರು, ಅಳದಂಗಡಿ ನಿವಾಸಿ ತಾರಾನಾಥರವರು ತನ್ನ ಬೈಕ್‌ನಲ್ಲಿ ಗುರುವಾಯನಕೆರೆ ಪೇಟೆಯತ್ತ ಬರುತ್ತಿರುವ ಸಂದರ್ಭ ತೆಂಕಕಾರಂದೂರು ಗುಂಡೇರಿ ತಿರುವಿನಲ್ಲಿ ಡಿಕ್ಕಿ ಸಂಭವಿಸಿದ್ದು ತಾರಾನಾಥ ಅವರ ಎಡಕಾಲು ಹಾಗೂ ಬಲಕೈಗೆ ಗಂಭೀರ ಗಾಯಗೊಂಡಿದೆ.

ಗುರುಪ್ರಸಾದ್ ರವರಿಗೆ ಮುಖಕ್ಕೆ ತೀವ್ರ ಸ್ವರೂಪದ ಪೆಟ್ಟಾಗಿದ್ದು ಇಬ್ಬರೂ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರನ್ನು ಪದ್ಮನಾಭ ಕುಲಾಲ್ ಬಳಂಜ ಹಾಗೂ ಜಲೀಲ್ ಬೆಳ್ತಂಗಡಿ ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.