ಗಣೇಶೋತ್ಸವ ಮತ್ತು ಶ್ರೀಕೃಷ್ಣಾಷ್ಟಮಿ ಆಚರಣೆ : ತಾಲೂಕು ಮಟ್ಟದ ಸಮಾಲೋಚನಾ ಸಭೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಶ್ರೀ ಗಣೇಶೋತ್ಸವ ಆಚರಿಸುವ ಬಗ್ಗೆ ಪದಾಧಿಕಾರಿಗಳ ತಾಲೂಕು ಮಟ್ಟದ ಸಭೆ ಜು. 16 ರಂದು.ಎಸ್.ಡಿ.ಎಂ ಸಭಾಂಗಣದಲ್ಲಿ ಜರುಗಿತು.

ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಿ, ಕೊರೊನಾ ಹಿನ್ನಲೆಯಲ್ಲಿ ಸಾವ೯ಜನಿಕ ಗಣೇಶೋತ್ಸವ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಯಾವ ರೀತಿ ಆಚರಿಸಬಹುದು ಎಂಬ ಬಗ್ಗೆ ಸಮಿತಿಯವರು ಸಲಹೆ ನೀಡುವಂತೆ ತಿಳಿಸಿದರು.

ತಾಲೂಕಿನ ವಿವಿಧ ಗಣೇಶೋತ್ಸವ ಸಮಿತಿಗಳ ಅಧ್ಯಕ್ಷರು ಈ ವಷ೯ ತಮ್ಮ ಸಮಿತಿಯಿಂದ ಯಾವ ರೀತಿಯ ಆಚರಣೆ ನಡೆಯುತ್ತದೆ ಎಂಬ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.
ಕಾಯ೯ಕ್ರಮದಲ್ಲಿ ಇ.ಒ ಜಯರಾಮ್, ಜಿ.ಪಂ ಸದಸ್ಯರಾದ ಕೊರಗಪ್ಪ ನಾಯ್ಕ, ಸೌಮ್ಯಲತಾ, ತಾ.ಪಂ ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ್ ಕಲ್ಮಂಜ, ಮುಖ್ಯಾಧಿಕಾರಿ ಸುಧಾಕರ್, ಸಕ೯ಲ್ ಇನ್ಸ್ ಪೆಕ್ಟರ್ ಸಂದೇಶ್ ಉಪಸ್ಥಿತರಿದ್ದರು.ಈ ವಷ೯ ಅಷ್ಟಮಿಯನ್ನು ಗ್ರಾಮದ ದೇವಸ್ಥಾನದಲ್ಲಿ ಭಜನೆ ಮತ್ತುಪೂಜೆ ಮಾಡಿ ಮುಗಿಸುವುದು, ಗಣೇಶೋತ್ಸವವನ್ನು ಗಣಹೋಮ ಮಾಡಿ ಒಂದು ದಿನದಲ್ಲಿ ಮುಗಿಸುವ ಬಗ್ಗೆ ಚಚಿ೯ಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.