ಪಟ್ರಮೆ “ಸಮೃದ್ಧಿ” ಗೃಹ ಹಸ್ತಾಂತರ

ಪಟ್ರಮೆ: ವೀರಕೇಸರಿ ಪಟ್ರಮೆ ಇವರ ಸಹಯೋಗದಲ್ಲಿ ಮತ್ತು ಇತರರ ನೆರೆವಿನಿಂದ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಬಡವರಾದ ಶ್ರೀಮತಿ ಗಿರಿಜಾ ಮೈಕೆ ಇವರಿಗಾಗಿ ಅಂದಾಜು ರೂ.2 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಗೃಹ ಸಮೃದ್ಧಿ ಇದರ ಕೀ ಹಸ್ತಾಂತರ ಕಾರ್ಯಕ್ರಮವು ಜು.15 ರಂದು ನೆರವೇರಿತು.

ಶಾಸಕರಾದ ಹರೀಶ್ ಪೂಂಜ ಕೀಯನ್ನು ಶ್ರೀಮತಿ ಗಿರಿಜಾ ರವರಿಗೆ ಹಸ್ತಾಂತರಿಸಿದರು

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಿರಿಯರಾದ ಕೃಷ್ಣ ಭಟ್ ಹಿತ್ತಿಲು, ಧರ್ಮಸ್ಥಳ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯೋಗಿಶ್ ಆಲಂಬಿಲ, ರತ್ನಾವರ್ಮ ಜೈನ್ ಉಳಿಯಬೀಡು, ತಿಲಕ್ ಪಟ್ರಮೆ, ಮನೋಜ್, ಉಮೇಶ್ ಆಲಂಗೂರು, ರುಕ್ಮಯ್ಯ ಪದಳ, ಡಾಕಯ್ಯ ಪೆರ್ಲೆ, ಮಂಜುನಾಥ ಶಾಂತಿಕಾಯ, ತಿಮ್ಮಪ್ಪ ಶಾಂತಿಕಾಯ, ಸಂತೋಷ್ ಕಲ್ಮಲೆ , ವೀರಕೇಸರಿ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.