ಸುಲ್ಕೇರಿ: ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ

ಸುಲ್ಕೇರಿ: ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಸುಲ್ಕೇರಿ,ನಾವರ,ಕುದ್ಯಾಡಿ, ಗ್ರಾಮದ ಪ.ಜಾತಿ ಮತ್ತು ಪ. ಪಂಗಡದ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮವು ಜು 14 ರಂದು ನಡೆಯಿತು.


ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಕುಟುಂಬಗಳಿಗೆ 500ಲೀಟರ್ ನ 100 ನೀರಿನ ಟ್ಯಾಂಕ್, ವಿಕಲಚೇತನ ಹೆಣ್ಣು ಮಕ್ಕಳಿಗೆ 7 ಹೋಲಿಗೆ ಯಂತ್ರ, ವಿಕಲಚೇತನರಿಗೆ 3 ವೀಲ್ ಚೇರ್, ವಾಟರ್ ಬೇಡ್, ಹಾಗೂ ಅರಣ್ಯ ಇಲಾಖೆಯ ವತಿಯಿಂದ ವಿವಿಧ ಜಾತಿಯ ಗಿಡಗಳನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿತರಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ತಾ.ಪಂ. ಸದಸ್ಯ ಸುಧೀರ್ .ಆರ್. ಸುವರ್ಣ, ಸುಲ್ಕೇರಿ ಗ್ರಾ.ಪಂ. ಆಡಳಿತಾಧಿಕಾರಿ ರತ್ನಾಕರ ಮಲ್ಯ. ಅಳದಂಗಡಿ ವಲಯ ಉಪಾರಣ್ಯಾಧಿಕಾರಿ ಸುರೇಶ್ ಗೌಡ, ಸುಲ್ಕೇರಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಯಶೋಧ, ಉಪಾಧ್ಯಕ್ಷೆ ಲಲಿತಾ, ಸದಸ್ಯರಾದ ನಾರಾಯಣ ಪೂಜಾರಿ,ರವಿ ಹಾರಡ್ಡೆ,ದಿನೇಶ್ ಬಿರ್ಮಜರಿ,ಆರ್ಚನಾ ನಾವರ,ರಜನಿ ನಾವರ,ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ಸದಾನಂದ ಗೌಡ,ಬಿಜಿಪಿ ಗ್ರಾಮ ಸಮಿತಿ ಅಧ್ಯಕ್ಷ ಯೋಗೀಶ್ ಪೂಜಾರಿ,ಕಾರ್ಯದರ್ಶಿ ಸಂದೀಪ್ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ರವಿ ಲಿಂಗಣ್ಣ ಗೌಡ,ಕಾರ್ಯದರ್ಶಿ ಕೊರಗಪ್ಪ ಮೊದಲಾದವರು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಪ್ರತಾಪ್ ಸಿಂಹ ನಾಯಕ್ ಹಾಗೂ ಗ್ರಾಮದ ಅಭಿವೃದ್ಧಿಗೆ ಸಹಕರಿಸುತ್ತಿರುವ ಶಾಸಕ ಹರೀಶ್ ಪೂಂಜ ಅವರನ್ನು ಸುಲ್ಕೇರಿ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.