ಉಜಿರೆ ಗಾಂಧಿನಗರ ನಿವಾಸಿ ಮೋಣಾಕ ನಿಧನ

ಉಜಿರೆ: ಇಲ್ಲಿನ ಗಾಂಧಿನಗರ ಕಕ್ಕೆಜಾಲ್ ಮಸ್ಜಿದ್ ಅಧ್ಯಕ್ಷರಾಗಿದ್ದ ಲೆತೀಫ್ ಅವರ ತಂದೆ, ಜೆಸಿಬಿ ಮೋಣಾಕ ಎಂದೇ ಪ್ರಸಿದ್ಧರಾಗಿದ್ದ ಅಹಮದ್ ಕುಂಞಿ (63 ವ.) ಅವರು ಜು. 9 ಅಲ್ಪಕಾಲದ ಅಸೌಖ್ಯದಿಂದ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದ್ದಾರೆ.

ಉಜಿರೆ ಜಿ.ಪಂ ಮಾಜಿ ಸದಸ್ಯ ಇಚ್ಚಿಲ ಸುಂದರ ಗೌಡ ಅವರ ಜೊತೆ ಅನೇಕ ವರ್ಷಗಳಿಂದ ಜೆಸಿಬಿ ಮಣ್ಣಿನ‌ಕೆಲಸದ ಗುತ್ತಿಗೆದಾರರಾಗಿ ಚಿರಪರಿಚಿತರಾಗಿದ್ದರು. ಸರಳ ಸಜ್ಜಿನಿಕೆಯ ವ್ಯಕ್ತಿಯಾಗಿದ್ದು, ಧಾರ್ಮಿಕ ಕೆಲಸ ಕಾರ್ಯಗಳಿಗೆ ತಮ್ಮಿಂದಾದ ಸಹಾಯಹಸ್ತ ನೀಡುತ್ತಿದ್ದರು.

ಮೃತರು ಪತ್ನಿ ಖತೀಜಮ್ಮ, ಪುತ್ರರಾದ ಲೆತೀಫ್ ಮತ್ತು ಮಧುರ ಕನ್ಸ್‌ಟ್ರಕ್ಷನ್ಸ್‌ನಲ್ಲಿ ಕರ್ತವ್ಯದಲ್ಲಿರುವ ಆಸಿಫ್, ಏಕೈಕ ಪುತ್ರಿ ರಝಿಯಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಮೃತರ ಮನೆಗೆ ಮಾಜಿ ಸಚಿವ ಗಂಗಾಧರ ಗೌಡ, ಮಾಜಿ ಶಾಸಕ ವಸಂತ ಬಂಗೇರ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ, ಜಿ.ಪಂ ಮಾಜಿ ಸದಸ್ಯ ಇಚ್ಚಿಲ ಸುಂದರ ಗೌಡ, ಉಜಿರೆ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ, ಪ್ರಮುಖರಾದ ರವಿ ಚಕ್ಕಿತ್ತಾಯ, ಶ್ರೀನಿವಾಸ ಗೌಡ ಮಧುರ, , ಅನಿಲ್ ರೊಡ್ರಿಗಸ್, ಬಿ.ಎಮ್ ಅಬ್ದುಲ್ ಹಮೀದ್ ಹಾಜಿ, ಶ್ರೀನಿವಾಸ ಕೆ ಗಾಂಧಿನಗರ ಮೊದಲಾದ ಅನೇಕ ಮಂದಿ ಗಣ್ಯರು ಭೇಟಿನೀಡಿ ಅಂತಿಮದರ್ಶನ ಪಡೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.