ಕೊರೊನಾ ಸಂದರ್ಭದಲ್ಲಿ ಬಿಜೆಪಿ ಸರಕಾರದಿಂದ ದರೋಡೆ ಆರೋಪಿಸಿ ಬೆಳ್ತಂಗಡಿಯಲ್ಲಿ ಎಸ್.ಡಿ.ಪಿ.ಐ. ಪ್ರತಿಭಟನೆ

ಬೆಳ್ತಂಗಡಿ: ಕೊರೊನಾದ ಸಂದರ್ಭದಲ್ಲಿಯೂ ರಾಜ್ಯ ಬಿಜೆಪಿ ಸರಕಾರ ದರೋಡೆ ನಡೆಸುತ್ತಿದೆ ಎಂದು ಆರೋಪಿಸಿರುವ ಎಸ್.ಡಿ.ಪಿ.ಐ. ಬೆಳ್ತಂಗಡಿ ತಾಲೂಕು ಸಮಿತಿ ಜು.13 ರಂದು ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದರು.

ಎಸ್.ಡಿ.ಪಿ.ಐ. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಸದಸ್ಯ ನಿಜಾಮುದ್ದೀನ್ ಗೇರುಕಟ್ಟೆ ಮಾತನಾಡಿ ಕೊರೊನಾದಿಂದ ಒಬ್ಬರು ತೀರಿ ಹೋದರೆ ಅವರ ಹೊತ್ತೊಯ್ದ ವಾಹನದ ಖರ್ಚನ್ನು ಕೂಡಾ ಸರಕಾರ ನೀಡುತ್ತಿಲ್ಲ ಮತ್ಯಾವುದಕ್ಕೆ ಅಷ್ಟು ಖರ್ಚಾಯಿತು. 50 ಎಂ.ಎಲ್.ನ ಸ್ಯಾನಿಟೈಸರ್ 70 ರೂ ಗೆ ಸಿಗುತ್ತದೆ. ಆದರೆ ಸರಕಾರ ಅದನ್ನು 600 ರೂ ಖರೀದಿಸುತ್ತಿದೆ. ಥರ್ಮಲ್ ಸ್ಕ್ಯಾನಿಂಗ್ ಮೆಶಿನ್ 3650 ರೂ ಸರಕಾರ 9 ಸಾವಿರ ನೀಡಿದೆ. 81 ಸಾವಿರ ಕಿಟ್ ನೀಡಿದ್ದೇವೆ. ಆ ಒಂದು ಕಿಟ್ ಗೆ 1650 ಎಂದು ಹೇಳುತ್ತಾರೆ ನಿಜವಾಗಿ ಅದರ ಬೆಲೆ ರೂ.250 ಅಷ್ಟೇ ಎಂದು ಹೇಳಿದರಲ್ಲದೆ ಇನ್ನಿತರ ಅಂಕಿ ಅಂಶ ನೀಡಿದರು.

ಪ್ರತಿಭಟನೆ ಯಲ್ಲಿ ಎಸ್.ಡಿ.ಪಿ.ಐ. ವಿಧಾನಪರಿಷತ್ ಕಾರ್ಯದರ್ಶಿ ಅಕ್ಬರ್, ಪ್ರಮುಖ ರಾದ ಖಾದರ್ ನಾವೂರು, ಶಾಕುರ್ ಕುಕ್ಕಟ್ಟೆ, ಫೈಸಲ್ ಬೆಳ್ತಂಗಡಿ, ಮುಸ್ತಫ ಜಿಕೆರೆ, ರಶೀದ್ ಬೆಳ್ತಂಗಡಿ, ಹನೀಫ್ ಪುಂಜಾಲಕಟ್ಟೆ, ಅಶ್ರಫ್ ಕಟ್ಟೆ ಮೊದಲಾದವರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.