ಬೆಳ್ತಂಗಡಿ:2020-21 ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ಸೂಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಮಾಲೋಚನಾ ಸಭೆ ಜು.13 ರಂದು ಎಸ್. ಡಿ. ಎಮ್ ಸಭಾಂಗಣದಲ್ಲಿ ನಡೆಯಿತು.
ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿ, ಬಡ ಕುಟುಂಬದ ಮಕ್ಕಳ ಶಿಕ್ಷಣದ ಹಿತ ರಕ್ಷಣೆ ಮಾಡುವುದು ಅತಿ ಅಗತ್ಯ. ತಾಲೂಕಿನಲ್ಲಿ 20,443 ಮಕ್ಕಳು ಸರಕಾರಿ ಶಾಲೆಯಲ್ಲಿದ್ದು, ಅವರನ್ನು ಕ್ರಿಯಾಶೀಲವಾಗಿ ಮಾಡುವುದು ಮತ್ತು ಶಿಕ್ಷಣ ಗುಣಮಟ್ಟ ಕಾಯ್ದುಗೊಳ್ಳುವಲ್ಲಿ ಪ್ರಯತ್ನಗಳನ್ನು ಮಾಡಬೇಕು. ಮನೆಯಲ್ಲಿರುವ ಮಕ್ಕಳಿಗೆ ಯಾವ ರೀತಿ ಶಿಕ್ಷಣ ನೀಡಬಹುದು ಎಂಬುದರ ಬಗ್ಗೆ ಶಿಕ್ಷಣದ ಪ್ರಯತ್ನಗಳನ್ನು ತಿಳಿಸಬೇಕು ಎಂದರು.
ವಿವಿಧ ಶಾಲಾ ಶಿಕ್ಷಕರು ರಜೆಯಲ್ಲಿ ಮಕ್ಕಳ ಜೊತೆ ಇಟ್ಟುಕೊಂಡ ಸಂಪರ್ಕಗಳ ಬಗ್ಗೆ ಹಾಗೂ ಪಾಠ ಮಾಡುತ್ತಿರುವ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ್ದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾ ಕೇಸರಿ, ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಶೆಟ್ಟಿ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ್ ಕಲ್ಮಂಜ, ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ಸೌಮ್ಯಲತಾ, ಜಯಂತ್ ಗೌಡ, ಶಿಕ್ಷಣ ಸಂಘಟನೆ ಮುಖ್ಯಸ್ಥ ಶಿವಶಂಕರ್, ಭುವನೇಶ್, ಪ್ರಭಾಕರ ನಾರಾವಿ, ರಘುಪತಿ ಭಟ್, ಸಮನ್ವಯಾಧಿಕಾರಿ ಶಂಭು ಶಂಕರ್, ಶಿಕ್ಷಣ ಸಂಯೋಜಕ ಸುಭಾಶ್ ಜಾದವ್ ಉಪಸ್ಥಿತರಿದ್ದರು
ಕೊರೊನಾ ಸೋಂಕು ಕಡಿಮೆಯಾಗಿ ಸರಕಾರಿ ಶಾಲೆಗಳು ಆರಂಭಗೊಳ್ಳುವ ಮೊದಲು ತಾಲೂಕಿನ ಒಂದು ಅಧಿಕಾರಿಗಳ ತಂಡ ರಚಿಸಿ, ಸರಕಾರಿ ಶಾಲೆಗಳ ಶಿಕ್ಷಕರು ಮಾಡಿದ ಸಾಧನೆಗಳನ್ನು ಗುರುತಿಸಿ 15 ಹಿ.ಪ್ರಾ ಶಾಲೆ ಮತ್ತು 10 ಕಿ.ಪ್ರಾ. ಶಾಲೆಗಳಿಗೆ ತಲಾ 1 ಲಕ್ಷ ಪ್ರೋತ್ಸಾಹ ಧನ ನೀಡುವುದಾಗಿ ಶಾಸಕ ಹರೀಶ್ ಪೂಂಜ ತಿಳಿಸಿದರು.