ನಡ: ನಡ ಗ್ರಾಮದ ನಿವೃತ ಶಿಕ್ಷಕ ರಾಧಕೃಷ್ಣ ಜೋಗಿತ್ತಾಯ(64ವ) ಅವರು ಜು.12 ರಂದು ಅಸೌಖ್ಯದಿಂದ ನಿಧನರಾಗಿದ್ದಾರೆ. ಮೇ.31 2016 ರಂದು ನಿವೃತ್ತರಾದ ಇವರು ತಣ್ಣೀರುಪಂಥ, ಗುರುವಾಯನಕೆರೆ, ನಾವೂರು, ಕೊರಂಜ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಬಿ.ಆರ್.ಸಿ ಯಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ 4 ವರ್ಷ ಸೇವೆ ಸಲ್ಲಿಸಿ, ಅಧ್ಯಾಪಕರ ಸಂಘದ ಕಾರ್ಯದರ್ಶಿಯಾಗಿ, ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕು ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ವಸಂತಿ, ಪುತ್ರ ವಿಘ್ನೇಶ್ ಜೋಗಿತ್ತಾಯ, ಓವ೯ ಪುತ್ರಿ ಪಲ್ಲವಿ ಹಾಗೂ ಬಂಧು ವಗ೯ದವರನ್ನು ಅಗಲಿದ್ದಾರೆ.