ವಿಶ್ವಹಿಂದೂ ಪರಿಷತ್ ಬೆಳ್ತಂಗಡಿ-ಓಡಿಲ್ನಾಳ ಗ್ರಾಮ ಗುಂಪಲಾಜೆ-ಪಣೆಜಾಲು ಎಂಬಲ್ಲಿ ನೂತನ ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಸತೀಶ್ ಗೌಡ ಗುಂಪಲಾಜೆ, ಉಪಾಧ್ಯಕ್ಷರಾಗಿ ಕಿರಣ್ ಭಟ್ ,ಸಂಯೋಜಕರಾಗಿ ಶಂಕರ ಗಾಣಿಗ, ಪ್ರಚಾರ ಹಾಗೂ ಪ್ರಸಾರ ಪ್ರಮುಖರಾಗಿ ರಾಮ್ ಪ್ರಸಾದ್ ಎನ್ ಎಸ್ ಆಚಾರ್ಯ, ಗೋರಕ್ಷಾ ಪ್ರಮುಖರಾಗಿ ಹರೀಶ್ ಸಪಲ್ಯ, ಸಹ ಸಂಯೋಜಕರಾಗಿ ಲೋಕೇಶ್ ಗೌಡ, ಕಾರ್ಯದರ್ಶಿಯಾಗಿ ಶೇಖರ್ ಪಣೆಜಾಲು, ಕುಲಾಲ್,ರಂಜಿತ್ ಪಣೆಜಾಲು, ಕೋಶಾಧಿಕಾರಿಯಾಗಿ ಸುನಿಲ್, ಸಹಕಾರ್ಯದರ್ಶಿಯಾಗಿ ಗಿರೀಶ್, ಸುರಕ್ಷಾ ಪ್ರಮುಖರಾಗಿ ವಿಘ್ನೇಶ್ ಪಣೆಜಾಲು,ಸತ್ಸಂಗ ಪ್ರಮುಖರಾಗಿ ಧನಂಜಯ ಗುಂಪಲಾಜೆ, ವಿಧ್ಯಾರ್ಥಿ ಪ್ರಮುಖರಾಗಿ ಶೈಲೇಶ್ ಆಯ್ಕೆಯಾದರು.
ಊರಿನ ಧರ್ಮಾಭಿಮಾನಿಗಳು ಬಂದು ಸಲಹೆ ಸೂಚನೆಗಳನ್ನು ನೀಡಿದರು,ಗುಂಪಲಾಜೆಯಲ್ಲಿ ಅಗತ್ಯವಾಗಿ ಬೇಕಾದ ಪುರಾತನ ಕಾಲದಿಂದಲೂ ಆಚರಿಸುತ್ತ ಬಂದಿರುವ ನಾಗಬನ ನಾಶವಾಗಿದ್ದುದು, ಅದನ್ನು ಅದಷ್ಟು ಶೀಘ್ರದಲ್ಲಿ ಅಭಿವೃದ್ಧಿ ಮಾಡಲು ಎಲ್ಲಾರೂ ಕೈ ಜೋಡಿಸುವ ನಿರ್ಧಾರ ಕೈಗೊಳ್ಳಲಾಯಿತು.ಈ ದೇವರ ಕಾರ್ಯಕ್ಕೆ ತಾಲ್ಲೂಕು ವಿಶ್ವಹಿಂದೂ ಪರಿಷತ್ ಭಜರಂಗದಳ ಘಟಕ ಸರ್ವ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಭಜರಂಗದಳದ ಸಂಚಾಲಕರಾದ ಸಂತೋಷ್ ಅತ್ತಾಜೆ,ಮೋಹನ್ ಕೆ. ಕಾರ್ಯದರ್ಶಿಗಳು ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡ, ರಮೇಶ್ ಧರ್ಮಸ್ಥಳ ಭಜರಂಗದಳ ಸಹ ಸಂಚಾಲಕರು, ವಿನೋದ್ ಕೆ ಅಖಾಡ ಪ್ರಮುಖ ಅತಿಥಿಗಳಾಗಿ ಆಗಮಿಸಿದ್ದರು.