ಬೆಳ್ತಂಗಡಿ; ತಾಲೂಕು ಪರಿಶಿಷ್ಟ ವರ್ಗದ ದೊಡ್ಡ ಪ್ರಮಾಣದ ವಿವಿದೋದ್ಧೇಶ ಸಹಕಾರಿ ಸಂಘ ಲ್ಯಾಂಪ್ಸ್ (ನಿ)ಬೆಳ್ತಂಗಡಿ ಇದರ ವತಿಯಿಂದ ಲ್ಯಾಂಪ್ಸ್ ಸೊಸೈಟಿಯ ದ್ವಿತೀಯ ಅವಧಿಯ ನಿರ್ದೇಶಕರಾದ ಚೆನ್ನ ಕೇಶವ ಇವರು ಜಿಲ್ಲಾ ಬಿಜೆಪಿ ಎಸ್ .ಟಿ.ಮೋರ್ಚಾ ಅಧ್ಯಕ್ಷ ರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಲ್ಯಾಂಪ್ ಸೊಸೈಟಿ ಅಧ್ಯಕ್ಷ ಲಿಂಗಪ್ಪ ನಾಯ್ಕ ಉರುವಾಲು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ್ ಸಿಂಹ ನಾಯಕ್, ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಜಿಲ್ಲಾ ಪಂಚಾಯತ್ ಸದಸ್ಯ ಕೊರಗಪ್ಪ ನಾಯ್ಕ, ಭೂ ಅಭಿವೃದ್ಧಿ ನಿರ್ದೇಶಕ ಕರಿಯ ನಾಯ್ಕ, ಬಿಜೆಪಿ ಮಂಡಲ ಉಪಾಧ್ಯಕ್ಷ ಸೀತಾರಾಮ್ ಬೆಳಾಲು ಮೊದಲಾದವರು ಉಪಸ್ಥಿತಿ ತರಿದ್ದರು.