ಅಟೋಮ್ಯಾಟಿಕ್ ಹ್ಯಾಂಡ್ ಸ್ಯಾನಿಟೈಸರ್ ಯಂತ್ರ ಅವಿಷ್ಕರಿಸಿದ SDM ಪಾಲಿಟೆಕ್ನಿಕ್‌ ವಿದ್ಯಾರ್ಥಿ ಅನಸ್ ಅಹಮ್ಮದ್

ಉಜಿರೆ; ಕೋವಿಡ್ 19 ಸಾಮುದಾಯಿಕವಾಗಿ‌ಹಬ್ಬಿದೆಯೇ ಎಂಬ ಭೀತಿ ಹುಟ್ಟಿಸುವ ರೀತಿಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ಎಲ್ಲರೂ ಸೇನಿಟೈಸರ್ ಬಳಕೆ, ಅಂತರ‌ಕಾಪಾಡುವಿಕೆ, ಕೈ ಗಳನ್ನು ಆಗಾಗ ತೊಳೆದು ಸ್ವಚ್ಛಗೊಳಿಸಿಕೊಳ್ಳುತ್ತಾ ಜಾಗೃತರಾಗಿದ್ದಾರೆ‌. ಸರಕಾರಿ – ಖಾಸಗಿ ಕಚೇರಿ, ಎಲ್ಲ ವ್ಯವಹಾರ ಕೇಂದ್ರಗಳಿಗೆ ನೀವು ಭೇಟಿ ನೀಡಿದರು ಅಲ್ಲಿ ನಿಮ್ಮನ್ನು ಮೊದಲು ಸ್ವಾಗತಿಸುವುದು ಸ್ಯಾನಿಟೈಸರ್ ಸ್ಟ್ಯಾಂಡ್ ಬಳಿ ಕುಳಿತು ವ್ಯವಸ್ಥೆ ಮಾಡುತ್ತಿರುವ ಸಿಬ್ಬಿಂದಿ‌.

ಸಣ್ಣ ಪುಟ್ಟ ಕಚೇರಿ ಅಥವಾ ಮಳಿಗೆಗಳಲ್ಲಿ ಅದಕ್ಕಾಗಿಯೇ ಸಿಬ್ಬಂದಿಯೊಬ್ಬರ ನೇಮಕ ಕಷ್ಟದ ಮಾತು. ಹಾಗಿರುವಾಗ ಆ ಜಾಗದಲ್ಲಿ ನಿಮಗೆ ಸ್ಥಾನ ತುಂಬಲು ಉಜಿರೆ ಎಅ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಬೆಳ್ತಂಗಡಿಯ ಅನಸ್ ಅಹಮದ್ ಅವರು ಸ್ವಯಮ ಚಾಲಿತ ಮತ್ತು ಸುಲಭವಾಗಿ ಬಳಸಬಹುದಾದ ಸೆನ್ಸಾರ್ ಯುಕ್ತ ಯಂತ್ರ ಅವಿಷ್ಕಾರ ನಡೆಸಿ ಎಲ್ಲರ‌ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಯಂತ್ರವನ್ನು ತನ್ನ ಮನೆಯಲ್ಲೇ ಬಳಸಿ‌ ಉಳಿಕೆಯಾಗಿರುವ ನೀರಿನ  ಪೈಪುಗಳಿಂದ ರಚಿಸಿದ್ದು, ಅತೀ ಕಡಿಮೆ ಭಾರಹೊಂದಿ ಸುಲಭವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಒಯ್ಯುವಂತೆ ನಿರ್ಮಿಸಿರುವುದು ಅವರ ವಿಷೇಶತೆ.

ಈ ಯಂತ್ರವು  ವಿದ್ಯುತ್ ಚಾಲಿತವಾಗಿದ್ದು ಸೆನ್ಸಾರ್ ಮೂಲಕ ಕಾರ್ಯ ನಿರ್ವಹಿಸುತ್ತದೆ. ಯಂತ್ರದ ನಿರ್ದಿಷ್ಠ ಬಾಗದಲ್ಲಿ  ಕೈ ಹಿಡಿದಾಗ ಸ್ಯಾನಿಟೈಸರ್ ಕೈಗೆ ಬೀಳುವ ವ್ಯವಸ್ಥೆ ಇದ್ದು ಯಂತ್ರ ವನ್ನು ಮುಟ್ಟದೆ   ಬಳಸ ಬಹುದಾಗಿದೆ.

ತಮ್ಮ ಕಾಲೇಜಿನ ವಿದ್ಯಾರ್ಥಿಯ ಕಾರ್ಯವೈಖರಿ ಯನ್ನು ಕಂಡು SDM polytcnic ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಮೆಚ್ಚುಗೆ ವ್ಯಕ್ತ ಪಡಿಸಿ ಇನ್ನಷ್ಟು ಅವಿಷ್ಕಾರ ನಡೆಸಲು ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ್ದಾರೆ.

ಅನಸ್ ಅಹಮ್ಮದ್ ಅವರು ಬೆಳ್ತಂಗಡಿ ನಗರ ನಿವಾಸಿ, ಚಪ್ಪಲ್‌ಮಾರ್ಟ್ ಮಾಲಕ ಹಾಗೂ ಸಾಮಾಜಿಕ ಕಾರ್ಯಕರ್ತ ಉಮರ್ ಮತ್ತು ಅಸ್ಮಾ ದಂಪತಿಯ ಪುತ್ರರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.