ಬೆಳ್ತಂಗಡಿ: ಜು11ರಂದು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನನಾ ಸಭೆಯಲ್ಲಿ ಜು.14 ರಿಂದ ಮಧ್ಯಾಹ್ನ 2 ಗಂಟೆಯ ನಂತರ ತಾಲೂಕಿನಲ್ಲಿ ಸ್ವಯಂ ಪ್ರೇರಿತ ಬಂದ್ ನಡೆಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು. ಮಂಗಳವಾರದಿಂದ ಹದಿನೈದು ದಿನಗಳ ಕಾಲ ಮಧ್ಯಾಹ್ನ 2:00 ಗಂಟೆಯಿಂದ ಸ್ವಯಂಘೋಷಿತ ಬಂದ್ ವಿಧಿಸಲಾಗಿದೆ.
ಜು.13 ರಂದು ಪ್ರತಿ ಪಂಚಾಯತ್ ಹಾಗೂ ನಗರ ವ್ಯಾಪ್ತಿಯಲ್ಲಿ ಈ ಬಗ್ಗೆ ಧ್ವನಿವರ್ದಕಗಳ ಮೂಲಕ ಪ್ರಚಾರ ಮಾಡಲು ತೀರ್ಮಾನಿಸಲಾಯಿತು. ಬಂದ್ ಮಾಡದೇ ವ್ಯವಹಾರ ನಡೆಸಿದ್ದಲ್ಲಿ ಅಂತವರನ್ನು ಜನರು ಪ್ರಶ್ನಿಸಿದರೆ ವ್ಯವಹಾರ ನಡೆಸಿದವರು ಉತ್ತರಿಸಬೇಕೆ ಹೊರತು ತಾಲೂಕು ಆಡಳಿತ ಇದಕ್ಕೆ ಜವಬ್ದಾರಲ್ಲ ಎಂದು ತಿಳಿಸಿದರು. 15 ದಿನಗಳ ಕಾಲ ಲಾಕ್ ಡೌನ್ ಗೆ ತಾಲೂಕಿನ ಎಲ್ಲಾ ನಾಗರೀಕರು, ವ್ಯವಹಾರಸ್ಥರು, ವಾಹನ ಚಾಲಕ-ಮಾಲಕರು ಸಹಕಾರ ನೀಡುವಂತೆ ಶಾಸಕ ಹರೀಶ್ ಪೂಂಜ ವಿನಂತಿಸಿದರು.