ಬೆಳ್ತಂಗಡಿ: ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಪ್ರತಾಪ ಸಿಂಹ ನಾಯಕ್ ಅವರನ್ನು ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ವಾಣಿ ಶಿಕ್ಷಣ ಸಂಸ್ಥೆ ಹಾಗೂ ವಾಣಿ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿ ಬೆಳ್ತಂಗಡಿ ಇದರ ವತಿಯಿಂದ ಗೌರವಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿ ವಾಣಿ ಶಿಕ್ಷಣ ಸಂಸ್ಥೆ ಹಾಗೂ ವಾಣಿ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿಯ ಬೆಳವಣಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಸಂಸ್ಥೆಗಳ ಮುಖೇನ ತಾವುಗಳು ನನ್ನನ್ನು ಅಭಿಮಾನದಿಂದ ಅಭಿನಂದಿಸಿದಕ್ಕೆ ವಂದನೆ ಸಲ್ಲಿಸಿ ತಮ್ಮ ಸಂಸ್ಥೆಗಳಿಗೆ ನಾನಿಂದ ಆಗುವ ಪ್ರಯೋಜನಗಳನ್ನು ಪಡೆಯುವಲ್ಲಿ ನೇರ ಕರೆ ಮಾಡುವ ಮೂಲಕ ಸಂಪರ್ಕಿಸುವಂತೆ ತಿಳಿಸಿದರು.
ಈ ಸಂಧರ್ಭ ವಾಣಿ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿಯ ಅಧ್ಯಕ್ಷರು ಹಾಗೂ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗೌರವಾಧ್ಯಕ್ಷರಾದ ಪದ್ಮ ಗೌಡ ಹೆಚ್. ಬೆಳಾಲು, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ ಗೌಡ ಕೊಯ್ಯೂರು, ಖಜಾಂಜಿ ರಾಜೀವ ಗೌಡ ಧರ್ಮಸ್ಥಳ ನಿರ್ದೇಶಕರುಗಳಾದ ಜಯಾನಂದ ಗೌಡ ‘ಪ್ರಜ್ವಲ್’ ಬೆಳ್ತಂಗಡಿ, ಗಣೇಶ್ ಗೌಡ ವಕೀಲರು ಕಡಿರುದ್ಯಾವರ, ಆನಂದ ಗೌಡ ಡಿ. ಉಜಿರೆ, ಬಾಲಕೃಷ್ಣ ಗೌಡ ಬಿರ್ಮೊಟ್ಟು, ವಿಜಯ ಗೌಡ ನ್ಯಾಯತರ್ಪು, ಉಷಾದೇವಿ ಕಿನ್ಯಾಜೆ, ಲಕ್ಷ್ಮಣ ಗೌಡ ಒಡಿಲ್ನಾಳ, ವಾಣಿ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿಯ ನಿರ್ದೇಶಕರುಗಳಾದ ಮಾಧವ ಗೌಡ ಬೆಳ್ತಂಗಡಿ, ಯಶವಂತ ಗೌಡ ಬನಂದೂರು, ಸುರೇಶ್ ಕೌಡಂಗೆ ಉಪಸ್ಥಿತರಿದ್ದರು.