ಧರ್ಮಸ್ಥಳ: ಧರ್ಮಸ್ಥಳ ಪೊಲೀಸ್ ಠಾಣೆಯ ಎಸ್.ಐ ಪವನ್ ನಾಯಕ್ ನೇತೃತ್ವದ ಪೊಲೀಸರ ತಂಡ ಜು.10 ರಂದು ರಾತ್ರಿ ಪುದುವೆಟ್ಟು ಗ್ರಾಮದ ಮೀಯಾರು ಎಂಬಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿ ಆಟದಲ್ಲಿ ನಿರತರಾಗಿದ್ದ 26 ಮಂದಿಯನ್ಶು ಬಂಧಿಸಿದ ಪ್ರಕರಣ ವರದಿಯಾಗಿದೆ.
ಖಚಿತ ಮಾಹಿತಿ ಮೇರೆಗೆ ರಾತ್ರಿ ಸುಮಾರು 01.15 ಗಂಟೆ ಸಮಯಕ್ಕೆ ಬೆಳ್ತಂಗಡಿ ತಾಲೂಕು ಮಿಯಾರ್ ಎಂಬಲ್ಲಿ ಗಣೇಶ ರವರ ಮನೆಯ ಖಾಲಿ ಜಾಗದಲ್ಲಿ ಕ್ಯಾಂಡಲ್ ಬೆಳಕಿನಲ್ಲಿ ಶಾಲನ್ನು ನೆಲಕ್ಕೆ ಹಾಸಿ ಕುಳಿತುಕೊಂಡು ಜುಗಾರಿ ಆಟ ಆಡುತ್ತಿರುವ ಸ್ಥಳಕ್ಕೆ ದಾಳಿ ನಡೆಸಿದಾಗ ಸಮವಸ್ತ್ರದಲ್ಲಿ ಪೊಲೀಸ್ ರವರನ್ನು ಕಂಡ ಆರೋಪಿಗಳು ಕುಳಿತಲ್ಲಿಂದ ಎದ್ದು ಓಡಿ ಹೋಗುತ್ತಿದ್ದವರನ್ನು ಬೆನ್ನಟ್ಟಿ ಹಿಡಿದು ವಿಚಾರಿಸಲಾಗಿ ಉಳಾಯಿ ಪಿದಾಯಿ ಜುಗಾರಿ ಆಟ ಆಡುತ್ತಿರುವುದಾಗಿ ತಿಳಿಸಿದರು.
ಜುಗಾರಿ ಆಟಗಾರರಾದ 1) ಅಶ್ವತ್ 2) ರಮೇಶ 3) ರಂಜೀಶ್ 4) ರಾಮಣ್ಣ ಪೂಜಾರಿ 5) ಆನಂದ ಗೌಡ 6) ಅಜಿತ್ 7) ಮನೋಜ್ 8) ಉಮೇಶ 9) ರೋಹಿತ್ 10) ಹರೀಶ್ 11) ನಯನ 12) ದಿನೇಶ 13) ಶ್ರವಣ್ 14) ಶಶಿಧರ 15) ಮಹಮ್ಮದ್ 16) ರತ್ನಾಕರ 17) ಭುವನೇಶ 18) ಪ್ರಸಾದ್ 19) ಆಂಟನಿ ವಿ ಡಿ 20) ಗಣೇಶ 21) ರೋಹಿತ್ 22) ಸತೀಶ್ 23) ರಹಿಮಾನ್ 24) ಜೋಸೆಫ್ 25) ಉಮೇಶ 26) ಸತೀಶ್ ಎಮ್ ಹಾಗೂ ಎಂಬವರನ್ನು ವಶಕ್ಕೆ ತೆಗೆದುಕೊಂಡು ಅವರುಗಳ ವಶದಿಂದ ಜುಗಾರಿ ಆಟಕ್ಕೆ ಉಪಯೋಗಿಸಿದ ರೂ. 26,185/- ನಗದು, 8 ಮೋಟಾರ್ ಆಟೋ ರಿಕ್ಷಾವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.