ಶ್ರೀ.ಕ್ಷೇ.ಧ.ಗ್ರಾ.ಯೋಜನೆಯಿಂದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಡಾ. ವಿರೇಂದ್ರ ಹೆಗ್ಗಡೆಯವರಿಂದ ರೂ. 1.73ಕೋಟಿ ಅನುದಾನ ಮಂಜೂರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೈಯಕ್ತಿಕ ಕುಟುಂಬಗಳ ಅಭಿವೃದ್ಧಿಯೊಂದಿಗೆ ಗ್ರಾಮದ ಅಭಿವೃದ್ಧಿ ಆಗಬೇಕೆಂಬುದು ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯವಾಗಿದೆ. ಜನ ಸಮುದಾಯದ ಕನಸುಗಳನ್ನು ಈಡೇರಿಸಲು ಗ್ರಾಮದ ಬೆಳವಣಿಗೆ ಅಗತ್ಯ. ಅದಕ್ಕಾಗಿ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮತ್ತು ಅದಕ್ಕೆ ಪ್ರೇರಣೆ ನೀಡುವುದು, ಅಲ್ಲದೇ ಆರ್ಥಿಕ ಸಹಕಾರವನ್ನು ನೀಡುವುದು ಸಮುದಾಯ ಅಭಿವೃದ್ಧಿಯ ಉದ್ದೇಶವಾಗಿದೆ.

ಯೋಜನೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಡಾ|ಎಲ್.ಹೆಚ್ ಮಂಜುನಾಥರವರ ಶಿಫಾರಸ್ಸಿನಂತೆ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ರಾಜ್ಯದ ವಿವಿಧ ಕಾಮಗಾರಿಗಳ ಅಭಿವೃದ್ಧಿಯ ವರದಿಯನ್ನು ಪರಿಶೀಲಿಸಿ, ಪ್ರಸ್ತುತ ಆರ್ಥಿಕ ವರ್ಷದಲ್ಲಿ ಈವರೆಗೆ ರೂ 1.73 ಕೋಟಿ ಅನುದಾನವನ್ನು ಮಂಜೂರಾತಿ ನೀಡಿರುತ್ತಾರೆ ಹಾಗೂ 1990 ರಿಂದ ಇದುವರೆಗೆ ರೂ 269.37 ಕೋಟಿ ಅನುದಾನವನ್ನು ಮಂಜೂರಾತಿ ನೀಡಿರುತ್ತಾರೆ ಎಂದು ಸಮುದಾಯ ಅಭಿವೃದ್ಧಿ ವಿಭಾಗದ ಹಿರಿಯ ಪ್ರಾದೇಶಿಕ ನಿರ್ದೇಶಕರಾದ ಎ. ಶ್ರೀಹರಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಜನಮಂಗಲ ಕಾರ್ಯಕ್ರಮ: ಧರ್ಮಸ್ಥಳದ ಮಹಾಮಸ್ತಕಾಭಿಷೇಕ ಸಂಧರ್ಭದಲ್ಲಿ ಜನಮಂಗಲ ಕಾರ್ಯಕ್ರಮವನ್ನು ಘೋಷಿಸಲಾಗಿದ್ದು, ಈ ಕಾರ್ಯಕ್ರಮದಡಿಯಲ್ಲಿ ವಿಶೇಷಚೇತನರಿಗೆ ಅವಶ್ಯವಿರುವ ವಿವಿಧ ಬಗೆಯ ಸಲಕರಣೆಯನ್ನು ಒದಗಿಸಲಾಗುತ್ತಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ನಮ್ಮ ರಾಜ್ಯದ 1240 ವಿಶೇಷಚೇತನರಿಗೆ ರೂ 35.00 ಲಕ್ಷ ಮೌಲ್ಯದ ಸಲಕರಣೆ ವಿತರಣೆಗೆ ಮಂಜೂರಾತಿಯನ್ನು ನೀಡಲಾಗಿದೆ.

ಗ್ರಾಮ ಕಲ್ಯಾಣ ಯೋಜನೆಯಡಿಯಲ್ಲಿ ಸಮುದಾಯ ಭವನ, ವೃದ್ಧಾಶ್ರಮ ನಿರ್ಮಾಣ, ವ್ಯಾಯಾಮ ಶಾಲೆ ನಿರ್ಮಾಣ, ಸಾರ್ವಜನಿಕ ಶೌಚಾಲಯ ರಚನೆ, ಭಜನಾ ಮಂದಿರ ನಿರ್ಮಾಣ, ಗೋ ಶಾಲಾ ನಿರ್ವಹಣೆ, ಮಹಿಳಾ ಮಂಡಳಿಯ ಕಟ್ಟಡ ರಚನೆ, ಅಂಧರ ಗೀತಗಾಯನ ಕಲಾ ಸಂಘಕ್ಕೆ ಸಹಾಯಧನ, ಸ್ತ್ರೀ-ಶಕ್ತಿ ಭವನದ ಕಟ್ಟಡ ನಿರ್ಮಾಣ ಮುಂತಾದ 33 ಕಾಮಗಾರಿಗಳಿಗೆ ಪ್ರಸ್ತುತ ಆರ್ಥಿಕ ವರ್ಷದಲ್ಲಿ ರೂ 36.೦೦ ಲಕ್ಷ ಅನುದಾನ ಮಂಜೂರು ಮಾಡಲಾಗಿದೆ.

ಹಾಲು ಸಂಘದ ಕಟ್ಟಡ ರಚನೆಗೆ ನೆರವು: ಹೈನುಗಾರಿಕೆಯು ಗ್ರಾಮೀಣ ಭಾಗದ ಮುಖ್ಯ ಕಸುಬಾಗಿದ್ದು, ಇದರಿಂದಲೇ ಅನೇಕ ಜನರು ತಮ್ಮ ದೈನಂದಿನ ಜೀವನ ನಡೆಸಲು ಸಹಕಾರಿಯಾಗುತ್ತಿದೆ. ಇದನ್ನು ಮನಗಂಡು ಗ್ರಾಮಗಳಲ್ಲಿನ ಹಾಲು ಉತ್ಪಾದಕರ ಸಂಘಗಳ ಕಟ್ಟಡ ರಚನೆಗೆ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಶ್ರೀ ಕ್ಷೇತ್ರದಿಂದ ಆರ್ಥಿಕ ನೆರವು ನೀಡಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಜನರು ಹೈನುಗಾರಿಕೆ ಮಾಡುವುದರೊಂದಿಗೆ ಸ್ವ-ಉದ್ಯೋಗದ ಜೀವನ ನಡೆಸಲು ಅನುಕೂಲವಾಗುತ್ತಿದ್ದು, ಪೂರಕವಾಗಿ ಇದರ ಮುಖೇನ 86 ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡ ರಚನೆಯ ಕಾಮಗಾರಿಗಳಿಗೆ ಪ್ರಸ್ತುತ ಆರ್ಥಿಕ ವರ್ಷದಲ್ಲಿ ರೂ 81.೦೦ ಲಕ್ಷ ಮೊತ್ತ ಮಂಜೂರಾತಿ ಮಾಡಲಾಗಿದೆ.

ಹಿಂದೂ ರುದ್ರಭೂಮಿ ಅಭಿವೃಧ್ಧಿ ಕಾರ್ಯಕ್ರಮದಡಿಯಲ್ಲಿ ದಹನ ಶೆಡ್ ರಚನೆ, ಸಿಲಿಕಾನ್ ಛೇಂಬರ್ ಅಳವಡಿಕೆ, ಆವರಣ ಗೋಡೆ ರಚನೆ, ದಾಸ್ತಾನು ಕೊಠಡಿ ನಿರ್ಮಾಣ, ತ್ಯಾಜ್ಯಗುಂಡಿ ನಿರ್ಮಾಣ, ಶೌಚಾಲಯ ನಿರ್ಮಾಣ, ನೀರು ಮತ್ತು ವಿದ್ಯುತ್ ವ್ಯವಸ್ಥೆ ಮುಂತಾದ ಅಭಿವೃದ್ಧಿ ಕಾಮಗಾರಿಯನ್ನು ಮಾಡಲಾಗುತ್ತಿದೆ. ಪ್ರಸ್ತುತ ಪ್ರಸ್ತುತ ಆರ್ಥಿಕ ವರ್ಷದಲ್ಲಿ ೦೬ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ರೂ 12.50 ಲಕ್ಷ ಮಂಜೂರಾತಿಯಾಗಿರುತ್ತದೆ.

ಜ್ಞಾನದೀಪ ಕಾರ್ಯಕ್ರಮದಡಿಯಲ್ಲಿ ಶಾಲಾ ಕಟ್ಟಡ ರಚನೆ, ಶಾಲಾ ಸಭಾಭವನ ನಿರ್ಮಾಣ, ಶಾಲಾ ರಂಗಮಂದಿರ ನಿರ್ಮಾಣ, ಶಾಲಾ ಶೌಚಾಲಯ ರಚನೆ, ಶಾಲಾ ಆವರಣ ಗೋಡೆ ರಚನೆ ಹೀಗೆ ವಿವಿಧ ಕಾಮಗಾರಿಗಳಿಗೆ ರೂ 8.25 ಲಕ್ಷ ಅನುದಾನ ಮಂಜೂರಾತಿ ಮಾಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.