ಗೇರುಕಟ್ಟೆ ಪರಪ್ಪು ಶಿಪ್ಟ್ ಕಾರು,ಆಟೋ ರಿಕ್ಷಾ ಪರಸ್ಪರ ಡಿಕ್ಕಿ

Advt_NewsUnder_1
Advt_NewsUnder_1

ಗೇರುಕಟ್ಟೆ : ಇಲ್ಲಿಯ ಕಳಿಯ ಗ್ರಾಮದ ಪರಪ್ಪು ಸಮೀಪದಲ್ಲಿ ಶಿಪ್ಟ್ ಕಾರು ಮತ್ತು ಆಪೆ ರಿಕ್ಷಾ ಪರಸ್ಪರ ಮುಖ ಮುಖಿ ಡಿಕ್ಕಿ ಹೊಡೆದ ಘಟನೆ ಜು.10 ರಂದು ರಾತ್ರಿ 8 ಗಂಟೆಗೆ ನಡೆದಿದೆ.

ಹತ್ತಿರದ ನಾಳ ದೇವಸ್ಥಾನದ ಪೂಜಾ ಆರ್ಚರು ಪೂಜೆ ಮುಗಿಸಿ ಮನೆಗೆ ತೆರಳುವ ವೇಳೆ ಪರಪ್ಪು ಕೊಯ್ಯೂರು ರಸ್ತೆಯ ಕಡೆಗೆ ತಿರುಗಿಸುವ ವೇಳೆಗೆ ಗುರುವಾಯನಕೆರೆ ಕಡೆಯಿಂದ ಉಪ್ಪಿ‌‌ನಂಗಡಿ ಕಡೆಗೆ ಸಂಚಾರಿಸುವಾಗ ಪರಸ್ಪರ ಡಿಕ್ಕಿ ಹೊಡೆಯಿತು. ಕಾರು ಚಾಲಕ ರಾಘವೇಂದ್ರ ಅಸ್ರಣ್ಣ ಹಾಗೂ ಆಟೋ ಚಾಲಕ ರಫೀಕ್ ಅಪಾಯದಿಂದ ಪಾರಾಗಿದ್ದು,  ಪ್ರಯಾಣಿಕರಿಗೆ ಸಣ್ಣ- ಪುಟ್ಟ ಗಾಯಗೊಂಡಿದ್ದರು. ತಕ್ಷಣ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ವಿಷಯ ತಿಳಿದು ಬೆಳ್ತಂಗಡಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು. ಹಾಗೂ ತನಿಖೆ ಗಾಗಿ ಅಪಘಾತ ಕ್ಕಿಡಾದ ವಾಹನಗಳು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹೊಯ್ಯಲಾಗಿದೆ.ಈ ಸಂದರ್ಭದಲ್ಲಿ ಸ್ಥಳೀಯ ನೂರಾರು ಜನ ಜಮಾಯಿಸಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.