ಕೋಲಾರ ತಹಶೀಲ್ದಾರರ ಹತ್ಯೆ: ಪ್ರತಿಭಟನೆ

ಬೆಳ್ತಂಗಡಿ: ಕೋಲಾರ ಜಿಲ್ಲೆ ಬಂಗಾರ್ ಪೇಟೆ ತಾಲೂಕು ತಹಶೀಲ್ದಾರಾಗಿದ್ದ,  ಬಿ ಕೆ ಚಂದ್ರ ಮೌಳೇಶ್ವರ ವರ ಹತ್ಯೆಯನ್ನು ಖಂಡಿಸಿ ಹಾಗೂ ಸರ್ಕಾರಿ ಅಧಿಕಾರಿ ನೌಕರರಿಗೆ ಅಗತ್ಯ ರಕ್ಷಣೆ ನೀಡುವ ಬಗ್ಗೆ ರಾಜ್ಯ ಸರಕಾರಿ ನೌಕರರ ಸಂಘದಿಂದ ಜು.10ರಂದು ಬೆಳ್ತಂಗಡಿ ತಹಶೀಲ್ದಾರ್ ಮೂಲಕ  ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ಇವರಿಗೆ ತಾಲೂಕು ಸಮಿತಿ ಅಧ್ಯಕ್ಷರಾದ  ಡಾ.ಜಯಕೀರ್ತಿ ಜೈನ್ ಇವರು ಮನವಿ ನೀಡಿದರು.

ಈ ಸಂದರ್ಭದಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಿ 1 ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ರಾಜ್ಯ ಪರಿಷತ್ ಸದಸ್ಯರಾದ  ಆನಂದ , ಉಪಾಧ್ಯಕ್ಷರಾದ  ಜಯರಾಜ್,  ಸಿದ್ದೇಶ್,  ಪರಮೇಶ್ ಟಿ, ತಾಲೂಕು ಕಾರ್ಯದರ್ಶಿ ರತಘುಪತಿ ಕೆ ರಾವ್, ಪದಾಧಿಕಾರಿಗಳಾದ ಶ್ರೀಮತಿ ರತ್ನಾವತಿ, ಶ್ರೀಮತಿ ಅನುಪಮಾ,  ವಿಶ್ವ ಕೆ, ಮಹಾವೀರ್ ಇವರು ಉಪಸ್ಥಿತರಿದ್ದರು. ಹಾಗೂ ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು, ಕೊರೋನಾ ತುರ್ತು ಸಮಯದಲ್ಲಿ ಚಳವಳಿಯನ್ನು ಬಿಟ್ಟು, ಮನವಿ ನೀಡುವ ಮೂಲಕ ಪ್ರತಿಭಟಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.