ಕಾಶಿಪಟ್ಣ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಕಾಶಿಪಟ್ಣ ಅಧ್ಯಕ್ಷತೆಯಲ್ಲಿ ಕೊರೊನಾ ವೈರಸ್ ತಡೆಗಟ್ಟಲು ವರ್ತಕರ ಸಮಾಲೋಚನಾ ಸಭೆಯನ್ನು ಜು.10 ರಂದು ನಡೆಸಲಾಯಿತು. ಕಾಶಿಪಟ್ಣ ವ್ಯಾಪ್ತಿಯ ಎಲ್ಲಾ ಅಂಗಡಿ ನಾಳೆಯಿಂದ ಪ್ರತಿ ದಿನ ಮಧ್ಯಾಹ್ನ 2 ಗಂಟೆಯಿಂದ 10 ದಿನಗಳು ಕೊರೊನಾ ವೈರಸ್ ತಡೆಗಟ್ಟಲು ಎಲ್ಲಾ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡುವುದಾಗಿ ಪಂಚಾಯತ್ ಸಭಾಂಗಣದಲ್ಲಿ ಅಂಗಡಿ ಮಾಲಿಕರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ತೀರ್ಮಾನಿಸಲಾಯಿತು. ಕಾನೂನು ಉಲ್ಲಂಘನೆ ಮಾಡಿದಲ್ಲಿ ರೂ: 500 ದಂಡ ವಿಧಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾಶಿಪಟ್ಣ ವರ್ತಕರು,ಆಟೋ ಚಾಲಕ-ಮಾಲಕರು,ಹೊಟೇಲ್ ,ಬೇಕರಿ, ಸಲೂನ್, ಮೀನು- ಮಾಂಸದ ಅಂಗಡಿಗಳ ಮಾಲೀಕರು ಸಭೆಯಲ್ಲಿ ಭಾಗವಹಿಸಿದ್ದರು.