ಬೆಳ್ತಂಗಡಿ: ತಾಲೂಕಿನ ಪಾರೆಂಕಿ ಗ್ರಾಮದ ಒಂದೇ ಕುಟುಂಬದ ನಾಲ್ಕು ಜನರಿಗೆ ಕೊರೊನಾ ಪಾಸಿಟಿವ್ ಆಗಿರುವುದು ಜು.9 ರಂದು ದೃಢವಾಗಿದೆ.
ಕೆಲವು ದಿನಗಳ ಹಿಂದೆ ಪಾರೆಂಕಿ ಗ್ರಾಮದ ಕಾನ್ವೆಂಟ್ ರಸ್ತೆ ಬಳಿಯ ಸಂಬಂಧಿಕರ ಮನೆಯಲ್ಲಿದ್ದು ಮೀನು ಮಾರಾಟ ಮಾಡುತ್ತಿದ್ದ ಓರ್ವ ಪುರುಷರಿಗೆ ಕೊರೊನಾ ಪಾಸಿಟಿವ್ ಆಗಿದ್ದು ಆ ಪೈಕಿ ಆ ಸಂಬಂಧಿಕರ ಮನೆಯ ಇಬ್ಬರು ಮಹಿಳೆಯರು , ಇಬ್ಬರು ಪುರುಷರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು ಇದರ ವರದಿ ಜು.9 ರಂದು ಬಂದಿದ್ದು ನಾಲ್ಕು ಜನರಿಗೂ ಕೊರೊನಾ ದೃಢವಾಗಿದೆ.