ಉಜಿರೆ: ಕುಂಟಿನಿ ಪರಿಸರದ ಓರ್ವ ವ್ಯಕ್ತಿಗೆ ಕೋವಿಡ್-19 ಪಾಸಿಟಿವ್ ವರದಿ ಬಂದ ಕಾರಣ ಆ ಪ್ರದೇಶದಲ್ಲಿ ಸೀಲ್ ಡೌನ್ ಮಾಡಲಾಗಿದ್ದು, ಅಲ್ಲಿರುವ 13 ಕುಟುಂಬಗಳಿಗೆ ದಾನಿಗಳ ಸಹಾಯದಿಂದ ಆಹಾರ ಕಿಟ್ ಗಳನ್ನು ಎಸ್.ಡಿ.ಪಿ.ಐ ಕುಂಟಿನಿ ಬ್ರಾಂಚ್ ವತಿಯಿಂದ ವಿತರಿಸಲಾಯಿತು.
ಎಸ್.ಡಿ.ಪಿ.ಐ ವಲಯ ಅಧ್ಯಕ್ಷ ರಫೀಕ್ ಕುಂಟಿನಿ, ಉಪಾಧ್ಯಕ್ಷ ಸಲೀಂ ಕುಂಟಿನಿ, ಎಸ್.ಡಿ.ಟಿ.ಯು ತಾಲೂಕು ಅಧ್ಯಕ್ಷ ಫಾರೂಕ್ ಮತ್ತು ಪಿ.ಎಫ್.ಐ ಏರಿಯಾ ಅಧ್ಯಕ್ಷ ಅಷ್ಫಾನ್ ಕಕ್ಕೆಜಾಲ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.