- ಗ್ರಾ.ಪಂಅಭಿವೃದ್ಧಿ ಅಧಿಕಾರಿಗಳು, ಐ.ಎಮ್.ಎ ವೈದ್ಯರುಗಳು ಹಾಗೂ ಪತ್ರಕರ್ತರು ಭಾಗಿ
- ಜು.11ರಂದು ತಾಲೂಕು ಮಟ್ಟದ ಸಭೆ
ಬೆಳ್ತಂಗಡಿ: ವೇಗವಾಗಿ ಹರಡುತ್ತಿರುವ ಕೊರೊನಾವನ್ನು ಬೆಳ್ತಂಗಡಿ ತಾಲ್ಲೂಕಿನಲ್ಲಿ ನಿಯಂತ್ರಿಸುವ ಬಗ್ಗೆ ಗ್ರಾ.ಪಂಅಭಿವೃದ್ಧಿ ಅಧಿಕಾರಿಗಳು, ಐ.ಎಮ್.ಎ ವೈದ್ಯರುಗಳು ಹಾಗೂ ಪತ್ರಕರ್ತರೊಂದಿಗೆ ಸಮಾಲೋಚನಾ ಸಭೆ ಶಾಸಕ ಹರೀಶ್ ಪೂಂಜರ ಜು.8ರಂದು ನಡೆಸಿದರು. ಈ ಸಭೆಯಲ್ಲಿ ತಾಲೂಕಿನಾದ್ಯಂತ ಪ್ರತಿದಿನ ಮಧ್ಯಾಹ್ನ ನಂತರ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಬಗ್ಗೆ ಗ್ರಾ.ಪಂ ವ್ಯಾಪ್ತಿಯಲ್ಲಿ ವರ್ತಕರೊಂದಿಗೆ ಸಮಾಲೋಚನಾ ಸಭೆ ನಡೆಸಲು ಮತ್ತು ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ನಿರ್ಧರಿಸಲಾಯಿತು. ಜು.11ರಂದು ಶನಿವಾರ ಅಪರಾಹ್ನ ತಾಲೂಕು ಮಟ್ಟದ ದೊಡ್ಡ ಸಭೆಯನ್ನು ಬೆಳ್ತಂಗಡಿ ಎಸ್.ಡಿ.ಎಮ್ ಕಲಾಭವನದಲ್ಲಿ ನಡೆಸುವುದಾಗಿ ಶಾಸಕರು ಪ್ರಕಟಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಮಹೇಶ್, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ಧರ್ಮಸ್ಥಳ, ಉಜಿರೆ, ಮುಂಡಾಜೆ, ಚಾರ್ಮಾಡಿ, ಕುವೆಟ್ಟು, ಮಡಂತ್ಯಾರು, ಮಾಲಾಡಿ, ವೇಣೂರು, ನಾರಾವಿ, ಅಳದಂಗಡಿ, ಕಳಿಯ, ತಣ್ಣೀರುಪಂಥ ಈ ಎಲ್ಲಾ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.