- ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ
ಬಳಂಜ: ಅಭಿವೃದ್ಧಿಯ ದೃಷ್ಟಿಯಲ್ಲಿ ಮನುಷ್ಯ ಪರಿಸರ ನಾಶ ಪಡಿಸಿದರೆ ಮುಂದೊಂದು ದಿನ ಜೀವ ಸಂಕುಲದ ವಿನಾಶಕ್ಕೆ ಹಾದಿಯಾಗುತ್ತದೆ. ಪರಿಸರ ಸಂರಕ್ಷಣೆಗೆ ಮುಂದಾಗದಿದ್ದರೆ ಅಪಾಯ ಖಚಿತ. ನಾವೆಲ್ಲರೂ ಪರಿಸರವನ್ನು ರಕ್ಷಸುವ ಮೂಲಕ ನಮ್ಮ ಜವಾಬ್ದಾರಿಯನ್ನು ಪಾಲಿಸೋಣ ಎಂದು ಅಳದಂಗಡಿ ಉಪಅರಣ್ಯಧಿಕಾರಿ ಸುರೇಶ್ ಗೌಡ ಹೇಳಿದರು. ಅವರು ಜು. ೮ರಂದು ಬಳಂಜ ಅಟ್ಲಾಜೆ ಶ್ರೀ ಮೂಜುಲ್ನಾಯ ಪಿಲಿಚಾಮುಂಡಿ ದೈವಸ್ಥಾನ ಜಿರ್ಣೋದ್ಧಾರ ಸಮಿತಿ, ಅಳದಂಗಡಿ ಅರಣ್ಯ ಇಲಾಖೆ, ಸರ್ವೋದಯ ಪ್ರೆಂಡ್ಸ್ ಕ್ಲಬ್ ಅಟ್ಲಾಜೆ ಇವರ ಜಂಟಿ ಆಶ್ರಯದಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಸುದ್ದಿ ಬಿಡುಗಡೆ ವಾರಪತ್ರಿಕೆ ವರದಿಗಾರ ಸಂತೋಷ್ ಪಿ. ಕೋಟ್ಯಾನ್ ಬಳಂಜ, ಪ್ರಗತಿಪರ ಕೃಷಿಕರಾದ ರಾಧಾಕೃಷ್ಣ ರೈ, ಸಾಂತಪ್ಪ ಸುವರ್ಣ, ರವೀಂದ್ರ ಪೂಜಾರಿ ಹೇವ ಅರಣ್ಯ ರಕ್ಷಕ ಚಿದಾನಂದ ಉಪಸ್ಥಿತರಿದ್ದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಮಾಜಿ ಸದಸ್ಯ ಯಶೋಧರ ಶೆಟ್ಟಿ, ಯುವ ಉದ್ಯಮಿ ಪ್ರವೀಣ್ ಪೂಜಾರಿ, ಸರ್ವೊದಯ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪುರಂದರ ಪೂಜಾರಿ, ಬಳಂಜ ವಾಲಿಬಾಲ್ ಕ್ಲಬ್ನ ಸುರೇಶ್ ಹೇವಾ, ಪ್ರಮೀತ್ ನಾಯ್ಗ, ಪ್ರಕಾಶ್ ಅಟ್ಲಾಜೆ, ಕನಿಷ್ಕ್, ಗುರುಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
ಭಾಸ್ಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. ಶ್ರೀ ಮುಜುಲ್ನಾಯ ಪಿಲಿಚಾಮುಂಡಿ ದೈವಸ್ಥಾನದ ಆವರಣದ ಸುತ್ತಮುತ್ತ ಸುಮಾರು ಜಾತಿಯ ಹಲವಾರು ಗಿಡಗಳನ್ನು ನೆಡಲಾಯಿತು. ದೈವಸ್ಥಾನದ ಜಿರ್ಣೋದ್ದಾರ ಸಮಿತಿ ಅಧ್ಯಕ್ಷ, ಚಿತ್ರ ನಿರ್ದೇಶಕ ವಿನು ಬಳಂಜ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.