ಕಣಿಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆಯ ಕಣಿಯೂರು ವಲಯ ಮಟ್ಟದ ಸ್ವಸಹಾಯ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಬಾಪೂಜಿ ಕೇಂದ್ರ ಕಲ್ಲೇರಿ ಯಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಕಣಿಯೂರು ಪ್ರಗತಿಬಂಧು ಸ್ವ ಸಹಾಯ ಸಂಘಗಳ ವಲಯ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ ವಹಿಸಿಕೊಂಡರು.
ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಸತೀಶ್ ಶೆಟ್ಟಿ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೈತಬಂಧು ಸಂಸ್ಥೆಯ ಶಿವಶಂಕರ್ ನಾಯರ್ ಶುಭಕೋರಿದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಕೇಂದ್ರ ಸಮಿತಿ ಅಧ್ಯಕ್ಷ ಪ್ರಭಾಕರ್, ಕಣಿಯೂರು ವಲಯದ ಮೇಲ್ವಿಚಾರಕ ಮಾಧವ.ಎಂ. ಉಪಸ್ಥಿತರಿದ್ದರು.
ಮೊಗ್ರು /ಕಾಯರ್ಪಾಡಿ ಸೇವಾ ಪ್ರತಿನಿಧಿ ಸರೋಜಾ ಅವರು ನಿರೂಪಿಸಿ, ಬಂದಾರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ನಿರಂಜನ್ ಸ್ವಾಗತಿಸಿ,
ಉರುವಾಲು /ಕರಾಯ ಬಿ ಸೇವಾಪ್ರತಿನಿಧಿ ಸೀತಾರಾಮ್ ಆಳ್ವ ಧನ್ಯವಾದ ನೀಡಿದರು.