ಮಾಲಾಡಿ; ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆತ್ತಿಗುಡ್ಡೆ ಎಂಬಲ್ಲಿ ವಾಸವಾಗಿದ್ದ, ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಮೂಗಲಿ ನಿವಾಸಿ, ತಾಯಿ ಮಗಳು ಗೀತಾ(44ವ.) ಮತ್ತು ಮಗಳು ರಕ್ಷಿತಾ(16ವ.) ಎಂಬಿಬ್ಬರು ಜೂ. 23 ರಿಂದ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಗೀತಾ ಅವರ ಪತಿ ರಮೇಶ ಎಂ.ಜೆ ಅವರು ಠಾಣೆಗೆ ದೂರು ನೀಡಿದ್ದಾರೆ.
ಜೂ.23 ರಂದು ನಾನು ಎಂದಿನಂತೆ ಬೆಳಿಗ್ಗೆ 9.00ಗಂಟೆಗೆ ಕೂಲಿ ಕೆಲಸಕ್ಕಾಗಿ ಮಾಲಾಡಿ ಗ್ರಾಮದ ಕೆತ್ತಿಗುಡ್ಡೆ ಮನೆಯಿಂದ ಹೋದವನು ಸಂಜೆ ಮನೆಗೆ ವಾಪಾಸಾದಾಗ ಇಬ್ಬರೂ ಮನೆಯಲ್ಲಿ ಇರಲಿಲ್ಲ. ಅಕ್ಕಪಕ್ಕದವರು, ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದಾಗಲೂ ಮಾಹಿತಿ ಅಲಭ್ಯವಾಗಿದ್ದು ಆ ಹಿನ್ನೆಲೆಯಲ್ಲಿ ದೂರು ನೀಡುತ್ತಿರುವುದಾಗಿ ಉಲ್ಲೇಖಿಸಿದ್ದಾರೆ. ನಾಪತ್ತೆಯಾಗಿರುವವರ ಬಗ್ಗೆ ಸುಳಿವು ಲಭಿಸಿದಲ್ಲಿ ಪುಂಜಾಲಕಟ್ಟೆ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.