ನಾವರ: ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದಿಂದ ಎಪಿಎಂಸಿ ಅಧ್ಯಕ್ಷ ಚಿದಾನಂದ ಪೂಜಾರಿರವರಿಗೆ ಸನ್ಮಾನ

Advt_NewsUnder_1
Advt_NewsUnder_1

ನಾವರ: ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ನಾವರ ಇದರ ವತಿಯಿಂದ ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕರವರಿಗೆ ಸನ್ಮಾನ ಹಾಗೂ ಸ್ವಜಾತಿ ಬಂಧುಗಳಿಗೆ ಕೊಡೆ ವಿತರಣೆ ಕಾರ್ಯಕ್ರಮವು ಇರಂತೊಟ್ಟು ಗುತ್ತು ರತ್ನಾಕರ ಕೋಟ್ಯಾನ್ ಅವರ ನಿವಾಸದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ನವೀನ್ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಬೆಳ್ತಂಗಡಿ ಯುವವಾಹಿನಿ ಘಟಕದ ಪೂರ್ವಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು,ಪ್ರಗತಿಪರ ಕೃಷಿಕ ವಿಶ್ವನಾಥ ಪೂಜಾರಿ ಕುದ್ಯಾಡಿ ಗುತ್ತು,ಯುವವಾಹಿನಿ ಘಟಕದ ನಿಕಟಪೂರ್ವ ಕಾರ್ಯದರ್ಶಿ ಸಂದೀಪ್ ನೀರಲ್ಕೆ,ಗ್ರಾ.ಪಂ‌ ಸದಸ್ಯ ರವಿ ಪೂಜಾರಿ ಹಾರಡ್ಡೆ ಉಪಸ್ಥಿತರಿದ್ದರು.

ರಶ್ಮಿ ಇರಂತೊಟ್ಟು ಪ್ರಾರ್ಥಿಸಿ,ಜೊತೆ ಕಾರ್ಯದರ್ಶಿ ಭಾರತಿ ರತ್ಕಾಕರ ಕೋಟ್ಯಾನ್ ಸ್ವಾಗತಿಸಿ,ಸಮಿತಿ ಕಾರ್ಯದರ್ಶಿ ಹರೀಣಿ ಎಲ್ ಪೂಜಾರಿ ನಿರೂಪಿಸಿ,ಗೌರವ ಸಲಹೆಗಾರ ಪ್ರಶಾಂತ್ ಹಿಮರಡ್ಡ ವಂದಿಸಿದರು.ಬಿಲ್ಲವ ಸಂಘದ ಪದಾಧಿಕಾರಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.