ಬೆಳ್ತಂಗಡಿ: ಕಳೆದ ಕೆಲ ಸಮಯದಿಂದ ಗುರುವಾಯನಕೆರೆ ಸಪ್ತಗಿರಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುವತ್ತಿರುವ V5 ಟೆಕ್ನಾಲಜೀಸ್ ಸೇಲ್ಸ್ & ಸರ್ವೀಸ್ ಸಂಸ್ಥೆಯ ಇನ್ನೊಂದು ಶಾಖೆಯು ಶ್ರೀ ದಾಮೋದರ ಕಾಂಪ್ಲೆಕ್ಸ್,ಹೋಟೆಲ್ ಉಜಾಲ ಬಳಿ ಬೆಳ್ಮನ್ ಕಾರ್ಕಳದಲ್ಲಿ ಜುಲೈ 13 ರಂದು ಬೆಳಿಗ್ಗೆ 9.30 ಕ್ಕೆ ಶುಭಾರಂಭಗೊಳ್ಳಲಿದೆ.
ಕಾರ್ಕಳ ಶಾಸಕ ಸುನೀಲ್ ಕುಮಾರ್ ನೂತನ ಸಂಸ್ಥೆಯ ಉದ್ಘಾಟನೆ ನೇರವೆರಿಸಲಿದ್ದಾರೆ.ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ಗೀತಾಂಜಲಿ ಎಂ ಸುವರ್ಣ, ಮಂಗಳೂರು ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕಾಧ್ಯಕ್ಷ ಉದಯ ಕುಮಾರ್ ಬಳ್ಳಾಲ್ಬಾಗ್, ಕಾರ್ಕಳ ಯೂತ್ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನಾ,ಬೆಳ್ಮನ್ ಹ್ಯುಮೆನಿಟಿ ಟ್ರಸ್ಟ್ ಸ್ಥಾಪಕ ರೋಷನ್ ಬೆಳ್ಮನ್,ಬಂಗಾಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ಹರೀಶ ಸಾಲಿಯಾನ್ ಮೊರ್ತಾಜೆ,ಉದ್ಯಮಿ ಕೋಡಿ ಕಂಬಳ ಪ್ರಸಾದ್ ಶೆಟ್ಟಿ, ದಾಮೋದರ ಕಾಂಪ್ಲೆಕ್ಸ್ ಮಾಲಕ ಕೇಶವರಾಯ,ಬೆಳ್ಮನ್ ಉದ್ಯಮಿ ಜೋಯಲ್ ಅರನ್ನ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಉದಯ ಬಂಗೇರ ನಾವೂರು,ಸತೀಶ್ ಪೂಜಾರಿ ಅಬ್ಬನಡ್ಕ ತಿಳಿಸಿದ್ದಾರೆ.