ಬೆಳ್ತಂಗಡಿ: ಕರಾವಳಿ ಜಿಲ್ಲೆಯ ಸಾಮಾನ್ಯ ಜನರೊಂದಿಗೆ ಜನಪ್ರತಿನಿಧಿಗಳನ್ನು ಕೊರೊನಾ ಕಾಡುತ್ತಿದೆ. ಈಗಾಗಲೇ ಶಾಸಕ ಭರತ್ ಶೆಟ್ಟಿ, ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೂ ಕೊರೋನಾ ಪಾಸಿಟಿವ್ ಆಗಿತ್ತು.
ಜು.7 ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಕೊರೋನಾ ವರದಿ ಬಂದಿದ್ದು, ನೆಗೆಟಿವ್ ಎಂದು ತಿಳಿದುಬಂದಿದೆ.
ಬಿಜೆಪಿ ನಾಯಕರೊಬ್ಬರ ಆಪ್ತರು ಶಾಸಕರನ್ನು ಭೇಟಿಯಾಗಿದ್ದು ಅವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ತಕ್ಷಣ ಕಚೇರಿಗೂ ಹೋಗದೆ, ಕಾರ್ಯಕರ್ತನ್ನು ಭೇಟಿ ಮಾಡದೆ ಮಂಗಳೂರಿಗೆ ತೆರಳಿ ಕೊವಿಡ್ ಪರೀಕ್ಷೆ ಮಾಡಿಸಿದ್ದರು. ಜು.7 ರಂದು ಅದರ ವರದಿ ಬಂದಿದ್ದು, ಕೊರೋನಾದ ಯಾವುದೇ ಗುಣಲಕ್ಷಣಗಳು ಶಾಸಕ ಹರೀಶ್ ಪೂಂಜಾರಲ್ಲಿ ಕಂಡು ಬಂದಿಲ್ಲ.