ಗಾಳಿ ಮಳೆ- ಕೋಳಿ ಫಾರಂ ಕಟ್ಟಡ ಧರೆಗೆ

Advt_NewsUnder_1
Advt_NewsUnder_1

ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾವ್ಯ ಗ್ರಾಮದ ಬೀಜದಡಿ ಎಂಬಲ್ಲಿ ಜು.6 ರಂದು ಗಾಳಿ- ಮಳೆಗೆ ಕೋಳಿ ಫಾರಂ ಕಟ್ಟಡ ಕುಸಿದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಬೀಜದಡಿ ನಿವಾಸಿ ಸಂದೀಪ್ ಪೂಜಾರಿ ಅವರ ಕೋಳಿ ಫಾರಂ ಘಟಕದಲ್ಲಿ ಸುಮಾರು 3,800 ಕೋಳಿಗಳಿದ್ದು ಮಧ್ಯಾಹ್ನದ ಗಾಳಿಗೆ ಕಟ್ಟಡ ಕುಸಿದಿದೆ.

ನೂರಾರು ಕೋಳಿಗಳು ಅವಶೇಷದಡಿ ಸಿಲುಕಿ ಸತ್ತಿವೆ. ಆರು ವರ್ಷಗಳಿಂದ ಕೋಳಿ ಫಾರಂ ನಡೆಸುತ್ತಿದ್ದು ಕಟ್ಟಡ ಕುಸಿದು ರೂ 10 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಸಂದೀಪ್ ಪೂಜಾರಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.