ಲಾಕ್ ಡೌನ್: ಬೆಳ್ತಂಗಡಿ ತಾಲೂಕಿನಾದ್ಯಂತ ಬಂದ್

ಬೆಳ್ತಂಗಡಿ: ಮಾಹಾಮಾರಿ ಕೊರೂನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಭಾನುವಾರದಂದು ಜಾರಿಮಾಡಿದ ಲಾಕ್ ಡೌನಿಂದ ಬೆಳ್ತಂಗಡಿ ತಾಲೂಕಿನಾದ್ಯಂತ ಅಂಗಡಿ- ಮುಂಗಟ್ಟು ಗಳು ಸಂಪೂರ್ಣ ಬಂದ್ ಆಗಿದೆ.

ಹಾಲು, ಪತ್ರಿಕೆ, ಜೌಷಧಿ ಅಂಗಡಿ ಮುಂಗಟ್ಟುಗಳನ್ನು ಹೊರತು ಪಡಿಸಿ, ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದೆ.

ಕೆಎಸ್ಸಾರ್ಟಿಸಿ, ಖಾಸಗಿ ಬಸ್ಸುಗಳು ರಸ್ತೆಗೆ ಇಳಿದಿಲ್ಲ. ಆಟೋ ಹಾಗೂ ಇತರ ಯಾವುದೇ ವಾಹನಗಳು ಇರಲಿಲ್ಲ. ಬೆಳ್ತಂಗಡಿ, ಉಜಿರೆ, ಮಡಂತ್ಯಾರು ಮೊದಲಾದ ಕಡೆಗಳಲ್ಲಿ ಪೋಲೀಸರು ಬ್ಯಾರಿಕೇಡ್ ಅಳವಡಿಸಿ, ವಾಹನಗಳನ್ನು ನಿಲ್ಲಿಸಿ ವಿಚಾರಣೆ ನಡೆಸಿ ಅಗತ್ಯ ಕೆಲಸಗಳಿಗೆ ಹೋಗುವವರನ್ನು ಮಾತ್ರ ಬಿಡುತ್ತಿದ್ದರು. ಶನಿವಾರ ರಾತ್ರಿ 8ಗಂಟೆಯಿಂದ ಸೋಮವಾರ ಬೆಳಿಗ್ಗೆ 5ಗಂಟೆ ತನಕ ಲಾಕ್ ಡೌನ್ ಜಾರಿಯಲ್ಲಿದೆ.

ನಾರಾವಿ ಪೇಟೆ ಸ್ತಬ್ಧ

ಅಳದಂಗಡಿ ಪೇಟೆ

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.