ಬೆಳ್ತಂಗಡಿ : ಬೆಳ್ತಂಗಡಿ ಸುತ್ತ ಮುತ್ತ ನಿರಂತರ ಬೈಕ್ ಕಳವು ನಡೆಯುತ್ತಿದ್ದು ಈ ಬಗ್ಗೆ ಕಾರ್ಯಾಚರಣೆ ಗಿಳಿದ ಬೆಳ್ತಂಗಡಿ ಪಿಎಸ್ಐ ನಂದ ಕುಮಾರ್ ಎಂ.ಎಂ ಮತ್ತು ಸಿಬ್ಬಂದಿಯವರು ಜು.4 ರಂದು ಜೈನ್ ಪೇಟೆ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ,ಎರಡು ಬೈಕಲ್ಲಿ ಬಂದ ಮೂವರನ್ನು ತಡೆದು ನಿಲ್ಲಿಸಿ ಪರಿಶೀಲಿಸಿ ವಿಚಾರಣೆಗೊಳಪಡಿಸಿದಾಗ ಇತ್ತೀಚೆಗೆ ಬೆಳ್ತಂಗಡಿ ಎಸ್ ಡಿ ಎಂ ಕಲಾ ಭವನದ ಮುಂಭಾಗದ ಮನೆಯಿಂದ ಮತ್ತು ಮೂಡಬಿದಿರೆ ಠಾಣಾ ವ್ಯಾಪ್ತಿಯಿಂದ ಕಳವು ಮಾಡಿರುವ ಬೈಕ್ ಎಂಬುದಾಗಿ ತಿಳಿದಿದ್ದು, ಈ ಆರೋಪಿಗಳು ನಮ್ಮ ಜೊತೆ ಉಜಿರೆ ಕುಂಟಿನಿಯ ಇನ್ನಿಬ್ಬರು ಇರುವ ಬಗ್ಗೆ ತಿಳಿಸಿದಂತೆ ಸಿಬ್ಬಂದಿಯವರು ಮತ್ತೆರಡು ಬೈಕನ್ನು ವಶಕ್ಕೆ ಪಡೆದು ಆರೋಪಿಗಳಾದ 1.ವಿಜಯ ಯಾನೆ ಆಂಜನೇಯ 23 ವರ್ಷ ತಂದೆ ಸುಭಾಶ್ ಕಾನ ಸುರತ್ಕಲ್,2.ಪ್ರದೀಪ್@ಚೇತನ್@ಪ್ರದಿ 27 ವರ್ಷ ತಂದೆ ದಿ.ನಾರಾಯಣ ಪೂಜಾರಿ ಉಳಾಯಿಬೆಟ್ಟು ಮಂಗಳೂರು 3.ಸುದೀಶ್ ಕೆಕೆ@ ಮುನ್ನ 20 ವರ್ಷ ತಂದೆ ಸುರೇಶ್ ಬಾಳೆಪುಣಿ ಪೂಪಾಡಿಕಲ್ಲು ಬಂಟ್ವಾಳ 4.ಮೋಹನ@ ಪುಟ್ಟ 21 ವರ್ಷ ಕುಂಟಿನಿ ಲಾಯಿಲ ಗ್ರಾಮ ಉಜಿರೆ ಬೆಳ್ತಂಗಡಿ5.ನಿತಿನ್ ಕುಮಾರ್ 22 ವರ್ಷ ತಂದೆ ಜನಾರ್ಧನ ಕುಂಟಿನಿ ಲಾಯಿಲ ಗ್ರಾಮ ಬೆಳ್ತಂಗಡಿ ರವರಿಂದ 4 ಬೈಕ್ ಕಳವಿಗೆ ಬಳಸಿದ ಓಮ್ನಿ ಕಾರು ಒಟ್ಟು ಮೂರು ಲಕ್ಷ ಅರುವತ್ತ ಮೂರು ಸಾವಿರ ರೂ./ ಮೌಲ್ಯದ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಎಸ್ ಡಿ ಎಂ ಕಲಾ ಭವನದ ಮುಂಭಾಗದ ಮನೆ,ಮದ್ದಡ್ಕ,ಉಜಿರೆ ಸಾಯಿರಾಂ ಪ್ಲ್ಯಾಟ್ ಬಳಿಯ ಹಾಗೂ ಮೂಡಬಿದಿರೆ ಬಳಿಯಿಂದ ಕಳವು ಮಾಡಿರುವ ವಾಹನಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಮಾನ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕೋವಿಡ್ 19 ಕೊರೋನ ವೈರಸ್ ತಡೆಗಟ್ಟುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಬೆಳ್ತಂಗಡಿ ಪೊಲೀಸರಿಗೆ ಮಳೆಗಾಲದ ಕಳವು ಕೂಡ ಸವಾಲಾಗಿತ್ತು.ಕೊರೋನ ವೈರಸ್ ಮುಂಜಾಗ್ರತಾ ಕ್ರಮದೊಂದಿಗೆ ಬೆಳ್ತಂಗಡಿ ಪೊಲೀಸರು ಐದು ಜನ ಕಳ್ಳರ ಜಾಲವನ್ನು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಭೇದಿಸಿ ಆತಂಕದಲ್ಲಿದ್ದ ಸಾರ್ವಜನಿಕರಲ್ಲಿ ಪೊಲೀಸರ ಮೇಲೆ ಭರವಸೆ ಮೂಡುವಂತಾಗಿದೆ.
ಈ ಕಾರ್ಯಾಚರಣೆಯು ಲಕ್ಷ್ಮೀ ಪ್ರಸಾದ್ ಬಿಎಂ IPS,ಪೊಲೀಸ್ ಅಧೀಕ್ಷಕರು ದಕ ಜಿಲ್ಲೆ ಮತ್ತು ವಿಕ್ರಂ ಆಮ್ಟೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದಕ ಜಿಲ್ಲೆ ರವರ ನಿರ್ದೇಶನದಂತೆ ಬಂಟ್ವಾಳ ಡಿವೈಎಸ್ಪಿ ಶ್ರೀ ವೆಲೆಂಟೈನ್ ಡಿಸೋಜ ಹಾಗೂ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿಜಿ ರವರ ಆದೇಶದಂತೆ ಬೆಳ್ತಂಗಡಿ ಪಿಎಸ್ಐ ನಂದ ಮಾರ್ ಎಂಎಂ ರವರ ನೇತೃತ್ವದಲ್ಲಿ ಪ್ರೊ.ಪಿಎಸ್ಐ ಶರತ್ ಕುಮಾರ್ ಎಎಸ್ಐ ಗಳಾದ ದೇವಪ್ಪ ಎಂಕೆ,ಕೆಜೆ ತಿಲಕ್,ಸಿಬ್ಬಂದಿ ಗಳಾದ ಲಾರೆನ್ಸ್ ಪಿಆರ್,ಇಬ್ರಾಹಿಂ ,ಅಶೋಕ್,ಚರಣ್ ರಾಜ್,ವೆಂಕಟೇಶ್, ಬಸವರಾಜ್ ರವರು ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿರುತ್ತಾರೆ.