ಬೆಳ್ತಂಗಡಿ ತಾಲೂಕಿನ ದಂಡಾಧಿಕಾರಿಗಳು, ತಹಶೀಲ್ದಾರರು, ಬೆಳ್ತಂಗಡಿ ಪಟ್ಟಣ ಪಂಚಾಯತ್ ಆಡಳಿತಾಧಿ ಕಾರಿಗಳಾಗಿ ಕಾಯ೯ನಿವ೯ಹಿಸಿದ ಗಣಪತಿ ಶಾಸ್ತ್ರಿ ಇವರು ವರ್ಗಾವಣೆ ಗೊಂಡು ಉತ್ತರ ಕನ್ನಡ ಜಿಲ್ಲೆ ಕುಮಟಾ ಸಹಾಯಕ ಆಯುಕ್ತರ ಕಚೇರಿಗೆ ಗ್ರೇಡ್-2 ತಹಶೀಲ್ದಾರರಾಗಿ ಕರ್ತವ್ಯ ನಿರ್ವಹಿಸಲು ತೆರಳುತ್ತಿದ್ದ ಅವರಿಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ನಡೆಸಲಾಯಿತು.
ಗಣಪತಿ ಶಾಸ್ತ್ರಿಯವರು ಮಾತನಾಡುತ್ತ ತಾನು ವೃತ್ತಿ ಆರಂಭಿಸಿದಾಗಿನಿಂದ ನಡೆದುಬಂದ ಶಿಸ್ತುಬದ್ಧವಾದ ಜೀವನಶೈಲಿ ಹಾಗೂ ಆಡಳಿತ ಶೈಲಿ ಸರಕಾರದ ಕಾನೂನು ಮತ್ತು ಮಾರ್ಗದರ್ಶನಗಳನ್ನು ಪಾಲಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಹೆಮ್ಮೆಯಿದೆ ಎಂದು ಅನುಭವ ಹಂಚಿಕೊಂಡರು. ಇವರು ಅನುಸರಿಸುವ ದಾರಿ ಇತರರಿಗೆ ಅನುಕರಣೀಯವಾಗಿದೆ. ಮುಂದೆ ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿ ಮುಖ್ಯ ಅಧಿಕಾರಿ ಸುಧಾಕರ ಹಾಗೂ ಸಮುದಾಯ ಸಂಘಟನಾಧಿಕಾರಿ ವೆಂಕಟರಮಣ ಶರ್ಮ ತಮ್ಮ ಅನಿಸಿಕೆಯನ್ನು ಹಂಚಿಕೊಂಡು ಶುಭ ಹಾರೈಸಿದರು. ಪಟ್ಟಣ ಪಂಚಾಯಿತಿಯ ಎಲ್ಲಾ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.