ಗುರುವಾಯನಕೆರೆ: ಇಲ್ಲಿನ ಬಸ್ಸು ನಿಲ್ದಾಣದ ಬಳಿ ಶ್ರೀ ವಿನಾಯಕ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಗೊಡ ನವಿ ಹರ್ಬಲ್ ಬ್ಯೂಟಿ ಪಾರ್ಲರ್ ಜೂ.22ರಂದು ಶುಭಾರಂಭಗೊ0ಡಿತು. ನಾಳ ಶ್ರೀ ದುರ್ಗಾಪರಮೇಶ್ವರಿಯ ಅರ್ಚಕರಾದ ರಾಘವೇಂದ್ರ ಅಸ್ರಣ್ಣರು ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕುವೆಟ್ಟು ಜಿ.ಪಂ. ಸದಸ್ಯರಾದ ಮಮತಾ ಶೆಟ್ಟಿ, ಕಟ್ಟಡದ ಮಾಲಕರಾದ ಸಂತೋಷ ಪ್ರಭು, ಪ್ರರ್ತಕರ್ತ ಭುವೆನೇಶ್, ಮಾಲಕರ ಮಾತೃಶ್ರೀ ಶಾಂತಾ, ಧನ್ಯವತಿ ಮುಂತದಾವರು ಉಪಸ್ಥಿತರಿದ್ದರು. ಬಂದಂತಹ ಅತಿಥಿಗಣ್ಯರನ್ನು ಮಾಲಕರಾದ ಅಶ್ವಿನಿ ನವೀನ್ ಸ್ವಾಗತಿಸಿ, ವಂದಿಸಿದರು.