ಕಳಿಯ ಗ್ರಾ.ಪಂ ವ್ಯಾಪ್ತಿಯಲ್ಲಿ 94 ಸಿ ಹಕ್ಕುಪತ್ರ ನೀಡುವಲ್ಲಿ ಪಂಚಾಯತ್ ನಿಂದ ಅಕ್ರಮವಾಗಿದೆ ಎಂದು ಪರಪ್ಪು ನಿವಾಸಿ ಆದಂ ಶಾಫಿ ಎಂಬವವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮಂಗಳೂರು ಎಸಿಬಿ ಪೊಲೀಸರ ತಂಡ ಜು.4 ರಂದು ಪಂಚಾಯತ್ ದಾಳಿ ನಡೆಸಿ ತನಿಖೆ ನಡೆಸುತ್ತಿದ್ದಾರೆ.
94ಸಿ ಹಕ್ಕುಪತ್ರ ನೀಡಲು ಗ್ರಾಮ ಪಂಚಾಯತ್ ನಿಂದ ಧೃಡ ಪತ್ರದ ಅಗತ್ಯವಿದ್ದು, ಪಂಚಾಯತು ಆಡಳಿತ ಮಂಡಳಿ ಗ್ರಾ.ಪಂ ಸದಸ್ಯ ಅಬ್ದುಲ್ ಕರೀಂ ಸೇರಿದಂತೆ 40 ಮಂದಿಗೆ ಧೃಡ ಪತ್ರ ಸೇರಿ ಅವ್ಯವಹಾರ ನಡೆದಿದೆ ಎಂಬ ದೂರಿನ ಹಿನ್ನಲೆಯಲ್ಲಿ ಈ ತನಿಖೆಯನ್ನು ನಡೆಸುತ್ತಿದೆ.