ಬೆಳ್ತಂಗಡಿ ರೋಟರಿ ಕ್ಲಬ್ ನ 2020-21 ನೇ ಸಾಲಿನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ

Advt_NewsUnder_1
Advt_NewsUnder_1

ಬೆಳ್ತಂಗಡಿ ರೋಟರಿ ಕ್ಲಬ್ ನ 2020-21 ನೇ ಸಾಲಿನ ಪದಾದಿಕಾರಿಗಳ ಪದ ಪ್ರಧಾನ ಸಮಾರಂಭವು ಜು.2 ರಂದು ನೆರವೇರಿತು. ಈ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ 3181ರ ಡಿ.ಜಿ.ಎನ್ ಮೇಜರ್ ಡೋನರ್ ಪ್ರಕಾಶ್ ಕಾರಂತ್ ರವರು ರೋಟರಿ ಕ್ಲಬ್ ಬೆಳ್ತಂಗಡಿಯ 50ನೇ ಅಧ್ಯಕ್ಷರಾಗಿ ರೋ.ಬಿ.ಕೆ. ಧನಂಜಯ ರಾವ್ ರವರಿಗೆ ಹಾಗೂ ಕಾರ್ಯದರ್ಶಿಯಾಗಿ ರೋ. ಶ್ರೀಧರ್ ಕೆ.ವಿ ಯವರಿಗೆ ಹಾಗೂ ನೂತನ ತಂಡಕ್ಕೆ ಪದಪ್ರಧಾನ ವನ್ನು ನೆರವೇರಿಸಿದರು.

ಪದಪ್ರಧಾನ ಸಮಾರಂಭವನ್ನು ಕೋವಿಡ್ 19 ರ ಪ್ರಸ್ತುತ ಪರಿಸ್ಥಿತಿಯಿಂದಾಗಿ ಯೂಟ್ಯೂಬ್, ಫೇಸ್ ಬುಕ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡಲಾಯಿತು.

ರೋಟರಿ ಕ್ಲಬ್ ಬೆಳ್ತಂಗಡಿಗೆ ಸುಧಾಕರ.ಎಂ.ಎಚ್, ಡಾ.ಅಶ್ವಿನ್, ಕೇಶವ ಪೈ, ಶ್ರೀನಿವಾಸ ರಾವ್ ಧರ್ಮಸ್ಥಳ, ರತ್ನವರ್ಮ ಜೈನ್ ಧರ್ಮಸ್ಥಳ, ಸಂದೇಶ್ ರಾವ್ ಧರ್ಮಸ್ಥಳ, ಶ್ರೀನಾಥ್.ಕೆ.ಎಂ ಎಂಬ 7 ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು.

ಅರ್ಥಪೂರ್ಣವಾಗಿ ಗಲ್ವಾನ್ ಕಣಿವೆಯಲ್ಲಿ ಮಡಿದ ಸೈನಿಕರಿಗೆ ರೋಟರಿ ಕ್ಲಬ್ ನ ಸದಸ್ಯರಾದ ಮಾಜಿ ಸೈನಿಕರಾದ ಮೇ.ಜ. ಎಂ.ವಿ ಭಟ್, ಸುನಿಲ್ ಶೆಣೈ, ಡಿ.ಎಂ.ಗೌಡ ಹಾಗೂ ಅತಿಥಿಗಳಿಂದ ಶ್ರದ್ಧಾಂಜಲಿಯನ್ನು ಸಲ್ಲಿಸಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಕು.ಚೈತ್ರ ಅಡಿಗ ಧರ್ಮಸ್ಥಳ ರವರ ನೃತ್ಯದಿಂದ ಹಾಗೂ ರೋ.ಡಾ.ಸುಧೀರ್ ಪ್ರಭುರವರ ಪ್ರಾರ್ಥನೆಯಿಂದ ಆರಂಭವಾದ ಕಾರ್ಯಕ್ರಮ 2019-20 ನೇ ಸಾಲಿನ ಅಧ್ಯಕ್ಷರಾದ ರೋ.ಜಯರಾಮ್ ರವರು ಸ್ವಾಗತಿಸಿದರು, ಪ್ರಕಾಶ್ ನಾರಾಯಣ್ ರವರು 2019-20 ನೇ ಸಾಲಿನ ರೋಟರಿ ಕಾರ್ಯಕ್ರಮಗಳ ವರದಿಯನ್ನು ನೀಡಿದರು, 2020-21 ನೇ ಸಾಲಿನ ಕಾರ್ಯದರ್ಶಿ ಶ್ರೀಧರ್ .ಕೆ.ವಿ ಯವರು ಧನ್ಯವಾದವನ್ನು ನೀಡಿದರು, ರೋ.ರಕ್ಷಾ ರಾಘ್ನೀಶ್ ಮತ್ತು ಮನೋರಮ ಭಟ್ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.