ಕೊಯ್ಯೂರು: ಇಲ್ಲಿನ ಆದೂರ್ಪೆರಾಲ್ ವಿಜಯ ಕಾಂಪ್ಲೇಕ್ಸ್ನ ವಠಾರದಲ್ಲಿ ಜು.3 ರಂದು ಸಾನ್ವಿ ಟ್ರೇಡರ್ಸ್ ಶುಭಾರಂಭಗೊಂಡಿತು. ಪೂರ್ವಾಹ್ನ ಗಣಹೋಮ, ಪೂಜಾ ವಿಧಿ ವಿಧಾನದೊಂದಿಗೆ ನೇರವೇರಿತು.
ಈ ಸಂದರ್ಭ ಕಟ್ಟಡ ಮಾಲಿಕರಾದ ಮುರುಳೀಧರ್ ಭಟ್, ಕೊಯ್ಯೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಗಳು, ಕೊಯ್ಯೂರು ಹಾಲು ಉತ್ಪಾದಕರ ಸಂಘದ ಸದಸ್ಯರು, ಅಧ್ಯಕ್ಷರು, ಸಾರ್ವಜನಿಕರು, ಅಂಚೆ ಕಛೇರಿ ಸಿಬ್ಬಂದಿಗಳು ಆಗಮಿಸಿ ಸಂಸ್ಥೆಗೆ ಶುಭಹಾರೈಸಿದರು. ಸಾನ್ವಿ ಟ್ರೇಡರ್ಸ್ನ ಮಾಲಕರಾದ ಸುದ್ದಿ ಪತ್ರಿಕಾ ವಿತರಕರಾದ ರಜನಿ ಮತ್ತು ವಿನಾಯ ಕೆ. ದಂಪತಿಗಳು ಶುಭಾರಂಭಕ್ಕೆ ಆಗಮಿಸಿದ ಬಂಧು, ಗಣ್ಯರು ಹಿತೈಸಿಗಳು ಸತ್ಕರಿಸಿ ಕೃತಜ್ಞತೆ ಸಲ್ಲಿಸಿದರು. ಹಾಗೂ ನನ್ನ ಸಂಸ್ಥೆಯಲ್ಲಿ ಗುಣಮಟ್ಟದ ಪ್ಲಾಸ್ಟಿಕ್, ಅಲ್ಯೂಮಿನಿಯಂ, ಸ್ಟೀಲ್ ಪಾತ್ರೆಗಳು, ಸೋಲಾರ್ ಟರ್ಪಾಲುಗಳು ದೊರೆಯುತ್ತದೆ. ಸಂಸ್ಥೆಯ ಮಾಲಕರು ತಿಳಿಸಿದರು.