ವೇಣೂರು: ಸರಕಾರದ ಧಾರ್ಮಿಕದತ್ತಿ ಇಲಾಖೆಗೆ ಒಳಪಟ್ಟ ಇತಿಹಾಸ ಪ್ರಸಿದ್ಧ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧಿಕಾರಾವಧಿಯು ಮುಗಿದು ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ.
ಸಮಿತಿ ಅಧ್ಯಕ್ಷರಾದ ಎ. ಜಯರಾಮ ಶೆಟ್ಟಿ ಅವರು ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಗ್ರಾಮಲೆಕ್ಕಿಗ ಉಮೇಶ್ ಅವರಿಗೆ ಜೂ. 29ರಂದು ಅಧಿಕಾರ ಹಸ್ತಾಂತರ ಮಾಡಿದರು.
ಸರಿಸುಮಾರು 25 ಸುದೀರ್ಘ ವರ್ಷಗಳ ಕಾಲ ದೇವಸ್ಥಾನದ ಆಡಳಿತ ನಡೆಸಿದ ಎ. ಜಯರಾಮ ಶೆಟ್ಟಿಯವರು ದೇಗುಲದ ಸರ್ವ ಅಭಿವೃದ್ಧಿಗೆ ಶ್ರಮಿಸಿದ್ದರು. ಇವರ ಅಧಿಕಾರ ಅವಧಿಯ 1985 ಮತ್ತು 2007ರಲ್ಲಿ ಬ್ರಹ್ಮಕಲಶೋತ್ಸವ ನಡೆದಿತ್ತು. ಇದೀಗ ಮತ್ತೆ ಇವರ ಅವಧಿಯಲ್ಲೇ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅಧಿಕಾರ ಹಸ್ತಾಂತರದ ವೇಳೆ ವ್ಯವಸ್ಥಾಪನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.