ಲಾಯಿಲ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಮತ್ತು ಮೂವರು ಕಾರ್ಯದ್ಯಕ್ಷರುಗಳಾಗಿ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೇ, ಸಲೀಂ ಅಹಮದ್ ರವರ ಪದಗ್ರಹಣ ಕಾಯ೯ಕ್ರಮವನ್ನು ಲೃಾಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಬ್ರಹ್ಮಣ್ಯ ಸ್ಥಾನಿಕ ಸಭಾ ಭವನ ಇಲ್ಲಿ ಪ್ರತಿಜ್ಞಾ ದಿನ ಕಾರ್ಯಕ್ರಮವನ್ನಾಗಿ ನೆರವೇರಿಸಲಾಯಿತು.
ಅಧ್ಯಕ್ಷತೆಯನ್ನು ಕೆಪಿಸಿಸಿ ಎಸ್ಸಿ ಘಟಕ ರಾಜ್ಯ ಸಮಿತಿ ಸದಸ್ಯ ನಾಗರಾಜ್ ಎಸ್ ಲೃಾಲ ವಹಿಸಿದ್ದರು. ಲೃಾಲ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಗಿರಿಧರ್ ಪೂಜಾರಿ ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣಪ್ಪ ಪೂಜಾರಿ ಲೃಾಲ, ಪ್ರತಿಜ್ಞ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಸ್ಟೇನಿ ಪಿಂಟೊ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಾಜಿಕ ಜಾಲತಾಣ ಸದಸ್ಯರಾದ ರಹಿಮಾನ್ ಕುಂಠಿನಿ, ಬೆಳ್ತಂಗಡಿ ತಾಲೂಕು ಬೈರ ಸಮಾಜ ಸೇವಾ ಸಂಘ ಮುಖಂಡರಾದ ಎಚ್ ಬಿ ಸಂಜೀವ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ವಿಭಾಗ ಕಾರ್ಯದರ್ಶಿ ಮಹಮ್ಮದಾಲಿ ಕಕ್ಕೇನಾ, ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಶೀನಿವಾಸ್ ಅಂಬೇಡ್ಕರ್ ನಗರ ಲೃಾಲ, ಜಗನ್ನಾಥ ಗಾಂಧಿನಗರ, ಸಂಕಪ್ಪ ಪುತ್ರಬೈಲು, ಅಶ್ರಪ್ ಎಚ್ ಕಕ್ಕೇನಾ, ರೋಹಿತ್ ಪಡ್ಲಾಡಿ, ಅಕ್ಬರ್ ಅಲಿ ಕುಂಠಿನಿ, ಮಹಿಳಾ ಕಾಂಗ್ರೆಸ್ ಸದಸ್ಯರಾದ ಸೌಮ್ಯ ಪಡ್ಲಾಡಿ, ಚಂದ್ರಾವತಿ ಪುತ್ರಬೈಲು, ಶಾರದ ಗಾಂಧಿನಗರ ಹಾಗು ಕಾಂಗ್ರೆಸ್ ಪಕ್ಷದ ಲೃಾಲ ವಿಭಾಗದ ಕಾರ್ಯಕರ್ತರು ಉಪಸ್ಥಿತರಿದ್ದರು.