ಧರ್ಮಸ್ಥಳ ಗ್ರಾಮ ಸಮಿತಿ ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಗ್ರೇಸ್ ಗ್ರಾಮ ಸಮಿತಿ ವತಿಯಿಂದ ಕೆಪಿಸಿಸಿ ರಾಜ್ಯ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರ ಪದಪ್ರಧಾನ ಕಾರ್ಯಕ್ರಮ ಬೆಳ್ತಂಗಡಿ ಎ.ಪಿಎಂಸಿ ಅಧ್ಯಕ್ಷ ಕೇಶವ ಗೌಡ ಪಿ ಯವರ ಮನೆಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ ಸಮಿತಿಯ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತ್ ಸದಸ್ಯ ದೇವಸ್ಯ ಟಿ.ವಿ, ಗ್ರಾಮ ಸಮಿತಿ ಮಾಜಿ ಅಧ್ಯಕ್ಷ ರಮಾನಂದ ಶೆಟ್ಟಿ, ಸದಸ್ಯರುಗಳಾದ ಡಿ.ಪ್ರಭಾಕರ ಪೂಜಾರಿ, ಹರೀಶ್ ಸುವರ್ಣ, ಸಿದ್ಧಿಕ್, ಸದಾಶಿವ, ಕೇಶವ ಗೌಡ ಪಿ, ಸಹಕಾರಿ ಸಂಘದ ಮಾಜಿ ನಿರ್ದೇಶಕ ಚೆನಿಯಪ್ಪ ಮತ್ತು ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರು.