ಇಂದಬೆಟ್ಟು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಕೆ.ಶಿವಕುಮಾರ್ ರವರ ಪ್ರತಿಜ್ಞಾ ವಿಧಿ ಕಾರ್ಯಕ್ರಮವು ಜೂ.2 ರಂದು ಇಂದಬೆಟ್ಟು ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಚರಿಸಿದರು. ಕಾರ್ಯಕ್ರಮವು ಇಂದಬೆಟ್ಟು ಅಗಸ್ಟಿಯವರ ಮನೆಯಲ್ಲಿ ನಡೆಯಿತು.ಕಾರ್ಯಕ್ರಮವನ್ನು ಹಿರಿಯ ಕಾರ್ಯಕರ್ತ ಸೋಮ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಉಸ್ತುವಾರಿ ಪ್ರವೀಣ್ ವಿ.ಜಿ ನಡ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಂಚಾಯತ್ ಮಾಜಿ ಉಪಾಧ್ಯಕ್ಷ ಇಬ್ರಾಹಿಂ, ಪಂ ಮಾಜಿ ಸದಸ್ಯ ಗಫೂರ್, ಪಂ ಮಾಜಿ ಸದಸ್ಯ ಸುಲೈಮಾನ್, ಸಾಮಾಜಿಕ ಜಾಲತಾಣದ ಸಮದ್, ಇಸ್ಮಾಯಿಲ್, ಮಧುಕರ, ಜಯರಾಮ ಮೊದಲಾದ ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರು.