ಕಳೆಂಜ: ಡಿ.ಕೆ.ಶಿವಕುಮಾರ್ ರವರ ಪ್ರತಿಜ್ಞಾ ವಿಧಿ ಕಾರ್ಯಕ್ರಮ ನೇರ ವೀಕ್ಷಣೆ

Advt_NewsUnder_1
Advt_NewsUnder_1

ಕಳೆಂಜ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಕೆ.ಶಿವಕುಮಾರ್ ರವರ ಪ್ರತಿಜ್ಞಾ ವಿಧಿ ಕಾರ್ಯಕ್ರಮವು ಜೂ.2 ರಂದು  ಕಳೆಂಜ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯ ಕರ್ತರು ಆಚರಿಸಿದರು.

ಕಾರ್ಯಕ್ರಮವು ಕಳೆಂಜ ಗ್ರಾಮದ ಅಮ್ಮಿನಡ್ಕದ ಪಿ.ಟಿ.ಸಭಾಸ್ಟಿನ್ ರವರ ಮನೆಯಲ್ಲಿ ನಡೆಯಿತು.ಕಾರ್ಯಕ್ರಮವನ್ನು ನಿಡ್ಲೆ ಸಿ ಎ ಬ್ಯಾಂಕ್ ನ ನಿರ್ದೇಶಕರಾದ ಅಶೋಕ್ ಭಟ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಆರಂಭದಲ್ಲಿ  ಕಾವ್ಯ, ದಿವ್ಯ ಮತ್ತು ನವ್ಯ ಪ್ರಾರ್ಥನೆ ಮಾಡಿದರು.ತದನಂತರ ನಿಡ್ಲೆ ಸಿ ಎ ಬ್ಯಾಂಕ್ ನ ನಿರ್ದೇಶಕ ರಾದ ಪಿ ಟಿ ಸಭಾಸ್ಟಿನ್ ರವರು ಎಲ್ಲರನ್ನೂ ಸ್ವಾಗತಿಸಿದರು. ಪ್ರಮಾಣ ವಚನವನ್ನು ಅಬ್ದುಲ್ಲ ನೆಕ್ಕರೆ ಭೋಧಿಸಿದರು.  ಕಾರ್ಯಕ್ರಮದಲ್ಲಿ ಕಳೆಂಜ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಜಾನಕಿ,ಶ್ರೀಮತಿ ಉಷಾ, ಶ್ರೀಮತಿ ವಿಜಯ ಮತ್ತು ನಿಡ್ಲೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ರಾದ ಶ್ರೀಮತಿ ಪ್ರೇಮ ಬಿ ಎಸ್ ಉಪಸ್ಥಿತರಿದ್ದರು .ಮತ್ತು ಬಹಳಷ್ಟು ಸಂಖ್ಯೆಯ ಕಾರ್ಯ ಕರ್ತರು ಹಾಜರಿದ್ದರು.

ಕಳೆಂಜ ಗ್ರಾಮದ ಪ್ರತಿಜ್ನಾ ವಿಧಿ ಕಾರ್ಯಕ್ರಮದ ಜವಾಬ್ದಾರಿಯನ್ನು ಶಿಶಿಲ ಗ್ರಾಮ ಪಂಚಾಯತ್ ಸದಸ್ಯರಾದ ರಾಜಾರಾಮ ಶಿಶಿಲ ರವರು ವಹಿಸಿಕೊಳ್ಳುವುದರೊಂದಿಗೆ ಯಶಸ್ವಿಯಾಗಿ ನಡೆಸಿಕೊಡುವಲ್ಲಿ ಉಪಸ್ಥಿತರಿದ್ದು ಸಹಕರಿಸಿದರು. ನಿಡ್ಲೆ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರಾದ ಶ್ರೀಧರ ಎಸ್ ರವರ ಧನ್ಯವಾದದೊಂದಿಗೆ ಮುಕ್ತಾಯ ಗೊಳಿಸಲಾಯಿತು .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.