ಬಾರ್ಯ ಗ್ರಾಮದಲ್ಲಿ ವಿಶೇಷ ರೀತಿಯಲ್ಲಿ ಡಿಕೆಶಿ ಪದಗ್ರಹಣ ಶರತ್ ಕುಮಾರ್ ಸ್ಮರಣಾರ್ಥ ಆಶಾ ಕಾರ್ಯಕರ್ತಯರಿಗೆ ಸನ್ಮಾನ

ಬಾರ್ಯ: ಇಲ್ಲಿನ ಕಾಂಗ್ರೆಸ್ ಗ್ರಾಮ ಸಮಿತಿ ವತಿಯಿಂದ ಡಿಕೆಶಿ ಪದಗ್ರಹಣ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

“ಪದಗ್ರಹಣ” ಕಾರ್ಯಕ್ರಮದ ಉದ್ಘಾಟನೆಯನ್ನು ಕಾಂಗ್ರೆಸ್ ನ ಹಿರಿಯ ಮುಖಂಡ ಕೃಷ್ಣ ಮಣಿಯಾಣಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಶರತ್, ಬಟ್ಯಪ್ಪ ಪೂಜಾರಿ ಅದಮಗುತ್ತು, ಕೃಷ್ಣಪ್ಪ ಪೂಜಾರಿ ಪರ್ನ್ದ ಗುತ್ತು, ಬೇಬಿ ಸಾಲಿಯಾನ್ ಬಜಕಳ, ಬಾರ್ಯ ಗ್ರಾಮದ ವೀಕ್ಷಕ ಡಿ.ಕೆ ಅಯೂಬ್ ಕರಾಯ, ನವೀನ್ ರೈ ಪೊರ್ಕಳ, ನವೀನ್ ಪ್ರಸಾದ್, ವಸಂತ್ ಸುವರ್ಣ ಪರ್ನ್ದ, ವಸಂತಿ ಜಯರಾಮ್ ರೈ ಬನ್ನೆಂಗಳ, ಬಾಲಕೃಷ್ಣ ಶೆಟ್ಟಿ ಸುಣ್ಣಾಜೆ, ಗುಡ್ಡಪ್ಪ ರೈ, ದಾವೂದ್ ಸರಳೀಕಟ್ಟೆ, ಟಿ. ಕೆ. ಉಸ್ಮಾನ್, ಟಿ.ಕೆ ಪುತ್ತುಮೋನು, ಟಿ. ಕೆ ಸುಲೈಮಾನ್, ಸುಂದರ ಪೂಜಾರಿ ಕಲಾಯ, ಅಶ್ರಫ್ ಪಲ್ಕಿ, ಶೇಖರ್ ಬಂಗೇರ ಪೊರ್ಕಳ, ರಾಮಚಂದ್ರ ಗೌಡ ಅಜಿರ, ಹಂಝ, ಜಲೀಲ್ ಕಾರ್ಪಾಡಿ , ಸುದೇಶ್ ಆದಮಗುತ್ತು, ಅಕ್ಬರ್, ಸಾಕೀರ್ ಸರಳೀಕಟ್ಟೆ, ಕಾಂತಪ್ಪ, ಇಸ್ಮಾಯಿಲ್, ನಝೀರ್, ಶಾಹಿಲ್, ಮುದರ, ಶ್ರೀಧರ್, ನಾರಾಯಣ ಗೌಡ, ಶ್ರೇಯಸ್ ಬಾರ್ಯ, ಅರ್ಪಿತ್ ಬುಳೆಕ್ಕಿಲ, ಸಮದ್ ಕೇರ್ಯ, ಹನೀಫ್, ಇರ್ಫಾನ್, ಬಿ.ಕೆ ಸುಲೈಮಾನ್, ವಿವೇಕ್ ರೈ ಹಾಗೂ ಹೆಚ್ಚಿನ ಕಾರ್ಯಕರ್ತರು ಉಪಸ್ಥಿತರಿದ್ದರು.

ಶರತ್ ಕುಮಾರ್ ಬಾರ್ಯ ಸ್ಮರಣಾರ್ಥ ಕೊರೊನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ;

ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಮುಖಂಡರೂ ಆಗಿದ್ದು ಪಕ್ಷವನ್ನು ಯಶಸ್ವಿಯಾಗಿ ಸಂಘಟಿಸಿದ ಜನನಾಯಕ, ಹತ್ತು ವರ್ಷಗಳ ಹಿಂದೆ ಅಕಾಲಿಕವಾಗಿ ಅಗಲಿದ ಶರತ್‌ ಕುಮಾರ್ ಬಾರ್ಯ ಅವರ ಸ್ಮರಣಾರ್ಥ, ಕೊರೊನಾ ಮಹಾಮಾರಿಯ ವಿರುದ್ಧ ಹಗಲಿರುಳೆನ್ನದೆ ತಮ್ಮ ಜೀವದ ಹಂಗು ತೊರೆದು ದುಡಿಯುತ್ತಿರುವ ಸ್ಥಳೀಯ ಆಶಾ ಕಾರ್ಯಕರ್ತೆಯರನ್ನು ಕಾಂಗ್ರೆಸ್ ನ ಹಿರಿಯ ಮುಖಂಡರ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.