ಲಾಯಿಲ ಶ್ರೀ ವೆಂಕಟರಮಣ ದೇವಳದಲ್ಲಿ ಕೆ. ಸುನೀಲ್ ಶೆಣೈ ಹಾಗೂ ಕೆ.ಪ್ರತಾಪ್ ಸಿಂಹ ನಾಯಕ್‌ರಿಗೆ ಅಭಿನಂದನಾ ಕಾರ್ಯಕ್ರಮ

ಆಷಾಡ ಶುದ್ಧ ದಶಮಿಯ ಪರ್ವಕಾಲ ಶ್ರೀ ದೇವರ ಚಾತುರ್ಮಾಸ ವೃತಾರಂಭದ ಶುಭದಿನದಂದು ದೇವಳದ ಅನುವಂಶಿಕ ಮೊಕ್ತೇಸರರಾದ ಕೆ. ಸುನಿಲ್ ಶೆಣೈ ಇವರ ಷಷ್ಟ್ಯಬ್ಧಪೂರ್ತಿ ಸಂಭ್ರಮಾಚರಣೆ ಅಂಗವಾಗಿ ಹಾಗೂ ಪ್ರತಿಷ್ಠಿತ ಜಿ.ಎಸ್.ಬಿ ಸಮಾಜದ ಸ್ವಾಭಿಮಾನದ ದ್ಯೋತಕ ಎಂಬಂತೆ ಕರ್ನಾಟಕ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಕೆ. ಪ್ರತಾಪ್‌ಸಿಂಹ ನಾಯಕ್ ಇವರಿಬ್ಬರಿಗೂ ಶ್ರೀ ದೇವರ ಸನ್ನಿಧಿಯಲ್ಲಿ ಆಡಳಿತ ಮಂಡಳಿ ವತಿಯಿಂದ ಸನ್ಮಾನ ಕಾರ್ಯಕ್ರಮವು ನೆರವೇರಿತು.


ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ| ಎಂ. ಸುಧೀರ್ ಪ್ರಭು ಇವರು ಉಪಸ್ಥಿತರಿದ್ದಂತಹ ಎಲ್ಲಾ ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣವನ್ನು ನೆರವೇರಿಸಿದರು. ಸಭಾಕಾರ್ಯಕ್ರಮದಲ್ಲಿ ಸನ್ಮಾನಿತ ಅತಿಥಿಗಳಿಬ್ಬರೂ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಮೊಕ್ತೇಸರರು, ಗೌರವ ಸಲಹೆಗಾರರು, ಶ್ರೀ ವೆಂಕಟರಮಣ ಸ್ವಾಮಿ ಸೇವಾ ಸಂಘ, ಮಹಾಲಕ್ಷ್ಮೀ ಮಹಿಳಾ ಮಂಡಳಿ, ವೆಂಕಟೇಶ ಭಜನಾ ಮಂಡಳಿ, ಮಹಿಳಾ ಭಜನಾ ಮಂಡಳಿ ಪದಾಧಿಕಾರಿಗಳು, ಹಿತೈಷಿಗಳು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು. ಕೆ. ಕೃಷ್ಣಾನಂದ ಭಟ್ ಕಾರ್ಯಕ್ರಮವನ್ನು ನಿರೂಪಿಸಿ, ಆಡಳಿತ ಮಂಡಳಿಯ ಕಾರ್ಯದರ್ಶಿ ಕೆ. ಅರವಿಂದ ಭಟ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.