ಬಳಂಜ: ಸ್ವ ಸಹಾಯ ಸಂಘಗಳ ಉದ್ಘಾಟನೆ, ಪರಿಸರ ಮಾಹಿತಿ, ಕೊರೊನಾ ಜಾಗೃತಿ ಕಾರ್ಯಕ್ರಮ

ಬಳಂಜ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಗುರುವಾಯನಕೆರೆ ವಲಯ ಮತ್ತು ಗ್ರಾಮ ಪಂಚಾಯತ್ ಬಳಂಜ,ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಬಳಂಜ ಇದರ ಆಶ್ರಯದಲ್ಲಿ ನೂತನವಾಗಿ ರಚಿಸಲಾದ 10 ಪ್ರಗತಿ ಬಂಧು ಸ್ವ ಸಹಾಯ ಸಂಘ ಗಳ ಉದ್ಘಾಟನೆ, ಪರಿಸರ ಮಾಹಿತಿ ಮತ್ತು ಗಿಡ ವಿತರಣೆ ಹಾಗೂ ಕೊರೊನಾ ಜಾಗೃತಿ ಕಾರ್ಯಕ್ರಮವು ಬಳಂಜ ದೇವಾಲಯದ ವಠಾರದಲ್ಲಿ ಜೂ28 ರಂದು ನಡೆಯಿತು.


ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿ ಇಂದಿನ ಜೀವನಕ್ಕೆ ಸಂಘದ ಅನಿವಾರ್ಯತೆಯಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಂಘದ ರಚನೆಯಿಂದ ಅಭಿವೃದ್ಧಿಯ ಕೆಲಸವನ್ನು ಕಾರ್ಯರೂಪಕ್ಕೆ ತರಲು ಸಾಧ್ಯ ಎಂದರು .

ಬಳಂಜ ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಗಿಡ ವಿತರಣೆ ಮಾಡಿ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಬಳಂಜ ಒಕ್ಕೂಟದ ಮಾಜಿ ಅಧ್ಯಕ್ಷ ಸದಾನಂದ ಸಾಲಿಯಾನ್ ಕೊರೊನ ವೈರಸ್ ವಿರುದ್ಧ ನಾವುಗಳು ಹೋರಾಟ ಮಾಡಬೇಕಾದರೆ ನಾವು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಸರಕಾರದ ನಿಯಮ ಪಾಲಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಡೀಕಯ್ಯ ಕುಲಾಲ್ ವಹಿಸಿದ್ದರು.

ವೇದಿಕೆಯಲ್ಲಿ ಬಳಂಜ ಗ್ರಾಮ ಪಂಚಾಯತ ಸದಸ್ಯ ಯಶೋಧರ ಶೆಟ್ಟಿ, ಒಕ್ಕೂಟದ ಮಾಜಿ ಅಧ್ಯಕ್ಷ ಈಶ್ವರ ದೇವಾಡಿಗ,ಮಾಜಿ ಕಾರ್ಯದರ್ಶಿ ಅಬೂಬಕ್ಕರ್ ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕ ದಿನೇಶ್ ಪ್ರಾಸ್ತಾವಿಕ ಮಾತಾನ್ನಡಿದರು.ವಿಮರ್ಷಾ ಪ್ರಾರ್ಥಿಸಿ, ಸೇವಾಪ್ರತಿನಿಧಿ ಪ್ರಮೀಳಾ ಸ್ವಾಗತಿಸಿ, ಕೃಷ್ಣಪ್ಪ ಪೂಜಾರಿ ಧನ್ಯವಾದವಿತ್ತರು. ಸೇವಾಪ್ರತಿನಿಧಿ ಸಂಜೀವ ಆಚಾರ್ಯ ಮತ್ತು ಜಗದೀಶ್ ಪರಾರಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.