ಆರಂಬೋಡಿ: ಒಟಿಪಿ ನಂಬರ್ ಪಡೆದು ಹಣ ಲಪಟಾಯಿಸಿದರು!

Advt_NewsUnder_1
Advt_NewsUnder_1

ವೇಣೂರು: ಬ್ಯಾಂಕ್ ಖಾತೆಯ ಒಟಿಪಿ ನಂಬರ್ ಪಡೆದು ಹಣ ಲಪಟಾಯಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಆರಂಬೋಡಿಯಲ್ಲಿ ನಡೆದಿದೆ.

ಆರಂಬೋಡಿ ಗ್ರಾಮದ ಅಬುರಾ ನಿವಾಸಿ ಇಂದಿರಾ ಪೂಜಾರ್ತಿ ರೂ. ೧೦ ಸಾವಿರ ಹಣ ಕಳೆದುಕೊಂಡವರು. ಇವರ ಪುತ್ರನ ಮೊಬೈಲ್‌ಗೆ +91 8544243846 ನಂಬರಿನಿಂದ ಕರೆ ಮಾಡಿರುವ ವ್ಯಕ್ತಿ ಹಿಂದಿ ಭಾಷೆಯಲ್ಲಿ ಮಾತನಾಡಿ, ಬ್ಯಾಂಕ್ ಮೆನೇಜರ್ ಎಂದು ನಂಬಿಸಿ ಖಾತೆಯಿಂದ ಸಾಲದ ಹಣವನ್ನು ತೆಗೆಯಲಿದೆ. ಮೊಬೈಲ್‌ಗೆ ಬಂದಿರುವ ಒಟಿಪಿ ಸಂಖ್ಯೆಯನ್ನು ತಿಳಿಸುವಂತೆ ಹೇಳಿ ಹಣವನ್ನು ಲಪಟಾಯಿಸಲಾಗಿದೆ. ವಂಚಕರು ಹೀಗೆ ಎರಡು ಬಾರಿ ಹಣವನ್ನು ಲಪಟಾಯಿಸಿದ್ದಾರೆ. ಬ್ಯಾಂಕ್ ಸಾಲದ ಬಗ್ಗೆ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಖಾತೆಗೆ ಕನ್ನ ಹಾಕಿರುವ ವಿಷಯ ಬೆಳಕಿಗೆ ಬಂದಿದ್ದು, ಹಣ ಕಳೆದುಕೊಂಡಿರುವ ಇಂದಿರಾ ಅವರ ಕುಟುಂಬ ತೀರಾ ಬಡತನದ್ದಾಗಿದ್ದು, ಶನಿವಾರ ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ. ಒಟಿಪಿ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಎಟಿಎಂ ಸಂಖ್ಯೆಯನ್ನು ದೂರವಾಣಿ ಕರೆಯಲ್ಲಿ ಯಾರಿಗೂ ತಿಳಿಸದಂತೆ ಬ್ಯಾಂಕ್‌ಗಳು ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ ಮೋಸ ಹೋಗುವವರೂ ಇದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.