ಉಜಿರೆ ಕಾಲಭೈರವೇಶ್ವರ ಸೊಸೈಟಿಯಲ್ಲಿ ನಾಡಪ್ರಭು ಕೆಂಪೇ ಗೌಡ ಜಯಂತಿ ಆಚರಣೆ

ಉಜಿರೆ:‌ಇಲ್ಲಿನ ಎಸ್ಪಿ ಆಯಿಲ್ ಮಿಲ್ ವಠಾರದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಜೂ.27 ರಂದು ನಡೆಯಿತು.

ತಾ. ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಮಹಿಳಾ ವೇದಿಕೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸೇವಾ ಸಂಘ ಉಜಿರೆ, ಯುವ ವೇದಿಕೆ, ಮಹಿಳಾ ಯುವ ವೇದಿಕೆ, ಕಾಲಭೈರವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ.(ನಿ.) ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಸಲ್ಪಟ್ಟಿತು.

ಮಹಿಳಾ ಘಟಕದ ಅಧ್ಯಕ್ಷೆ ಅಪರ್ಣ ಶಿವಕಾಂತ ಗೌಡ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸಂಘದ ಕಾರ್ಯಾಧ್ಯಕ್ಷ ತುಂಗಪ್ಪ ಗೌಡ ಮರಕಡ ನೆರವೇರಿಸಿದರು.

ಕೆಂಪೇಗೌಡರ ವ್ಯಕ್ತಿತ್ವ ಸಾಧನೆಗಳ ಬಗ್ಗೆ ಯುವ ವೇದಿಕೆಯ ಕಾರ್ಯದರ್ಶಿ ಅನಿಲ್ ಕುಮಾರ್ ಅಂತರ ವಿಸ್ತಾರವಾಗಿ ತಿಳಿಸಿದರು.

ವೇದಿಕೆಯಲ್ಲಿ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು, ಕಾಲಭೈರವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಅಧ್ಯಕ್ಷ ರಂಜನ್ ಜಿ ಗೌಡ, ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನೇಶ್ ಗೌಡ ಕಲ್ಲಾಜೆ, ಮಹಿಳಾ ಯುವ ವೇದಿಕೆಯ ಅಧ್ಯಕ್ಷೆ ಅನುಪಮ ಸತೀಶ ಗೌಡ , ಶಿವರಾಮಗೌಡ ಮಕ್ಕಿಗದ್ದೆ ಇವರು ಉಪಸ್ಥಿತರಿದ್ದು ಸಮಯೋಚಿತವಾಗಿ ಮಾತನಾಡಿದರು.

ಮಹಿಳಾ ಘಟಕದ ಕಾರ್ಯದರ್ಶಿ ಗೀತಾ ಚಿದಾನಂದ ಗೌಡ ಸ್ವಾಗತಿಸಿದರು. ಅನುಪಮ ಸತೀಶ್ ಗೌಡ ಧನ್ಯವಾದ ಅರ್ಪಿಸಿದರು.
ಮಮತಾ ಶಿವರಾಮ ಗೌಡ ಪ್ರಾರ್ಥನೆಹಾಡಿದರು.
ಸೌಹಾರ್ದ ಸಹಕಾರಿಯ ನಿರ್ದೇಶಕ ಜಯಂತ ಗೌಡ ಗುರಿಪಳ್ಳ, ದಾಮೋದರ ಸುರುಳಿ ಹಾಗೂ ಲಾಯಿಲ ಜಿಲ್ಲಾ ಪಂಚಾಯತ್ ಸದಸ್ಯೆ ಸೌಮ್ಯಲತಾ ಜಯಂತ ಗೌಡ ಹಾಗೂ ಸಮಾಜದ ಗಣ್ಯರನೇಕರು ಭಾಗವಹಿಸಿದ್ದರು.

ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾಸ್ಕ್ ಧರಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.