ಉಪ್ಪಿನಂಗಡಿ: ವಿದ್ಯುತ್ ಆಘಾತಕ್ಕೊಳಗಾಗಿ ಕರ್ತವ್ಯದಲ್ಲಿದ್ದ ಮೆಸ್ಕಾಂ ಪವರ್ ಮ್ಯಾನ್ ಮೃತಪಟ್ಟ ಘಟನೆ ಕಲ್ಲೇರಿಯಲ್ಲಿ ಜೂ.27ರಂದು ನಡೆದಿದೆ.
ಕಲ್ಲೇರಿ ಸೆಕ್ಷನ್ನ ಲೈನ್ಮ್ಯಾನ್ ವಿಜಾಪುರ ಮೂಲದ ಬಸವರಾಜ್ (26ವ) ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ದುರ್ದೈವಿ. ಕಲ್ಲೇರಿ ಸೆಕ್ಷನ್ನಲ್ಲಿ ಲೈನ್ ಆಫ್ ಮಾಡುವ ಸಂದರ್ಭ ಗ್ರೌಂಡ್ ಶಾರ್ಟ್ ಆಗಿ ವಿದ್ಯುತ್ ಆಘಾತಕ್ಕೊಳಗಾಗಿ ಮೈಮೇಲೆ ವಿದ್ಯುತ್ ಸಂಚಾರಗೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕೂಡಲೆ ಇವರನ್ನು ಉಪ್ಪಿನಂಗಡಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮೃತಪಟ್ಟೆದ್ದಾರೆ.
ಘಟನೆಯ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಪುತ್ತೂರು ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ.
ಸಜ್ಜನ ವ್ಯಕ್ತಿತ್ವ
ಸದಾ ನಗುಮುಖದಿಂದಿರುತ್ತಿದ್ದ ಬಸವರಾಜು ತನ್ನ ಕಾರ್ಯಕ್ಷಮತೆಯಿಂದಾಗಿ ಸ್ಥಳೀಯರಿಂದ ಅಪಾರ ಪ್ರೀತಿ ಸಂಪಾದಿಸಿದ್ದರು.